ತೊಡಿಕಾನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಧನುಪೂಜೆ

Advt_Headding_Middle
Advt_Headding_Middle
Advt_Headding_Middle

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುಪೂಜೆಯು ಡಿ. ೧೫ರಂದು ಅರ್ಧ ಏಕಾಹ ಭಜನೆಯು ಪ್ರಾರಂಭಗೊಂಡು ಡಿ. ೧೬ರಂದು ಪ್ರಾತಃಕಾಲ ೪.೪೫ಕ್ಕೆ ಸರಿಯಾಗಿ ಧನುಪೂಜಾ ಕಾರ್ಯಕ್ರಮವು ಪ್ರಾರಂಭಗೊಂಡಿತು.

ಪ್ರಧಾನ ಅರ್ಚಕ ಕೇಶವಮೂರ್ತಿ ಮತ್ತು ಸಿಬ್ಬಂದಿವರ್ಗದವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮವು ನಡೆಯಿತು. ಬೆಳಿಗ್ಗೆ ಪೂಜಾ ನಂತರ ಉಪಹಾರದ ವ್ಯವಸ್ಥೆಯನ್ನುಮಾಡಲಾಗಿತ್ತು. ಬೆಳಿಗ್ಗೆ ಗಂಟೆ ೪ರಿಂದ ಭಕ್ತಾಧಿಗಳಿಗೆ ತೊಡಿಕಾನಕ್ಕೆ ಹೋಗಲು ಮತ್ತು ಪೂಜೆ ಮುಗಿದ ಬಳಿಕ ಬರಲು ಸುಳ್ಯದಿಂದ ಅವಿನಾಶ್ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

ನಾರಾಯಣ ರೈಯವರು ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಉಳುವಾರು, ಪಿ.ಬಿ.ದಿವಾಕರ ರೈ ಮತ್ತು ಸಹೋದರರು, ಗುರುಮನೆ ಕುಮಾರ ಬೈಪಡಿತ್ತಾಯ, ಕೆ.ಕೆ.ಬಾಲಕೃಷ್ಣ, ಶ್ರೀಮತಿ ಮಾಲತಿ ಬೋಜಪ್ಪ, ನಿಕಟಪೂರ್ವಾಧ್ಯಕ್ಷ ಕಿಶೋರ್ ಉಳುವಾರು, ಎಸ್.ಪಿ.ಲೋಕನಾಥ್, ತಾಪಂ. ಸದಸ್ಯೆ ಪುಷ್ಪಾ ಮೇದಪ್ಪ, ಸಂತೋಷ್ ಕುತ್ತಮೊಟ್ಟೆ, ಚಂದ್ರಕಲಾ ನಾರಾಯಣ ಕುತ್ತಮೊಟ್ಟೆ, ಜನಾರ್ಧನ ಬಾಳೆಕಜೆ, ಧನಂಜಯ ಕಲ್ಲಗದ್ದೆ, ಗಣಪತಿ ಭಟ್, ದೇವಸ್ಥಾನದ ಮೆನೇಜರ್ ಆನಂದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.