HomePage_Banner
HomePage_Banner
HomePage_Banner
HomePage_Banner

ಯೇನೆಕಲ್ಲು ಸ.ಹಿ.ಪ್ರಾ.ಶಾಲಾ ವಾರ್ಷಿಕ ಕ್ರೀಡಾಕೂಟ

ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಯೇನೆಕಲ್ಲು ಇದರ ವಾರ್ಷಿಕ ಕ್ರೀಡಾಕೂಟ ಯೇನೆಕಲ್ಲಿನ ಅರ್ಪಣಾ ಕ್ರೀಡಾಂಗಣದಲ್ಲಿ ನಡೆಯಿತು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಯನ್.ಕೆ. ಭುವನೇಶ್ವರಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ರಸಾದ್ ಮಾದನಮನೆ ವಹಿಸಿದ್ದರು. ಧ್ವಜಾರೋಹಣವನ್ನು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಗಣೇಶ್ ನಾಯರ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯರುಗಳಾದ ಶ್ರೀಮತಿ ವೇದಾವತಿ ಕೆ, ಕುಶಾಲಪ್ಪ ಪೂಜಾರಿ, ರಾಮಣ್ಣ ನಾಯ್ಕ, ಯೇನೆಕಲ್ಲು ಸ.ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಾಯತ್ರಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಕುಮಾರ್ ಪೈಲಾಜೆ, ರೈತ ಯುವಕ ಮಂಡಲ ಯೇನೆಕಲ್ಲು ಇದರ ಅಧ್ಯಕ್ಷ ಪ್ರಶಾಂತ್ ದೋಣಿಮನೆ, ಶ್ರೀ.ಕ್ಷೇ.ಧ.ಗ್ರಾ.ಯೋ. ಯೇನೆಕಲ್ಲು ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಕೆಬ್ಬೋಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮೇದಪ್ಪ ಗೌಡ ಮೇರ್ಕಜೆ, ಹಿರಿಯ ಕ್ರೀಡಾಪಟು ರಾಮಯ್ಯ ಮಾದನಮನೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಈಶ್ವರ ಮಾಸ್ತರ್ ನೆಕ್ರಾಜೆ, ಕಾರ್ಯದರ್ಶಿ ಮೋಹನ್ ಕುಮಾರ್ ಕೋಟಿಗೌಡನಮನೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ ಡಿ.ಎಸ್, ಸದಸ್ಯರುಗಳಾದ ಇಸ್ಮಾಯಿಲ್, ಉಮೇಶ್ ಪಿ, ಲಿಂಗಪ್ಪ ಎ, ಲವನಾಥ ಕೆ, ನಾಗೇಶ್ ಹೆಚ್, ಮುತ್ತಪ್ಪ ಗೌಡ ಪಿ, ಶ್ರೀಮತಿ ಅನಿತಾ ಕೆ, ಶ್ರೀಮತಿ ಗೀತಾ ಪಿ, ಶ್ರೀಮತಿ ಮಂಜುಳಾ ದಿವಾಕರ್, ಶ್ರೀಮತಿ ಮಮತಾ, ಶ್ರೀಮತಿ ಹೇಮಲತಾ ಕೆ, ಶ್ರೀಮತಿ ಪೂರ್ಣೀಮಾ ಪಿ, ತಿಮ್ಮಯ್ಯ, ನೀಲಪ್ಪ ಬಿ ಮತ್ತು ಶ್ರೀಧರ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅರ್ಚನಾ, ಅದಿತಿ, ಪವನ ಪ್ರಾರ್ಥಿಸಿದರು. ತಿಲಕ್ ಬಿ, ಕಾರ್ತಿಕ್ ಕೆ, ಅಪೇಕ್ಷಾ, ಪವನ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಶಾಲಾ ನಾಯಕಿ ಅರ್ಚನಾ ಪ್ರತಿಜ್ಞಾವಿಧಿ ಯೋಚಿಸಿದರು. ಸ.ಶಿಕ್ಷಕಿಯರಾದ ಶ್ರೀಮತಿ ರತ್ನಾವತಿ ಕೆ, ಶ್ರೀಮತಿ ಲೀಲಾವತಿ ಬಿ, ಕು. ತೇಜಸ್ವಿ ಎಂ ಬಹುಮಾನ ಪಟ್ಟಿಯನ್ನು ವಾಚಿಸಿದರು. ಸಹ ಶಿಕ್ಷಕಿ ಶ್ರೀಮತಿ ರತ್ನಾವತಿ ಕೆ. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳಿಗೆ, ಶಾಲಾ ಮಕ್ಕಳಿಗೆ, ಹಳೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಊರವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.