ಕೇಂದ್ರದಿಂದ ಅತ್ಯುತ್ತಮ ಗ್ರಾಮಗಳ ಪಟ್ಟಿ ಪ್ರಕಟ ಬೆಳ್ಳಾರೆ ಗ್ರಾಮ ಪಂಚಾಯತ್‌ಗೆ ೧೬ ನೇ ರ‍್ಯಾಂಕ್, ಸಂಪಾಜೆ ಗ್ರಾಮ ಪಂಚಾಯತ್‌ಗೆ ೧೯ ನೇ ರ‍್ಯಾಂಕ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು ಅಗ್ರ ೧೦ರಲ್ಲಿ ರಾಜ್ಯದ ಐದು ಗ್ರಾಮಗಳು ಕಾಣಿಸಿ ಕೊಂಡಿವೆ. ಅಗ್ರ ೨೦ ರ‍್ಯಾಂಕ್ ಪಟ್ಟಿಯಲ್ಲಿ ೫೦ ಗ್ರಾಮಗಳು ಕಾಣಿಸಿಕೊಂಡಿದ್ದು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮ ಪಂಚಾಯತ್‌ಗೆ ೧೬ ನೇ ರ‍್ಯಾಂಕ್ ಹಾಗೂ ಸಂಪಾಜೆಗೆ ೧೯ನೇ ರ‍್ಯಾಂಕ್ ಲಭಿಸಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂತ್ಯೋದಯ ಯೋಜನೆಯಡಿ ವಿವಿಧ ಮಾನದಂಡಗಳ ಅಡಿಯಲ್ಲಿ ೪೧, ೬೧೭ ಗ್ರಾ.ಪಂ.ಗಳ ಮಾಹಿತಿಯನ್ನು ಕ್ರೋಢೀಕರಿಸಿ ಈ ಶ್ರೇಯಾಂಕವನ್ನು ನೀಡಲಾಗಿದೆ.
ರ‍್ಯಾಂಕಿಂಗ್ ಮಾನದಂಡವೇನು?
ರ‍್ಯಾಂಕಿಂಗ್‌ಗೆ ಒಟ್ಟು ೧೦೦ ಅಂಕ ಗಳಿಗೆ ೬ ಮಾನದಂಡಗಳನ್ನು ನಿಗದಿ ಮಾಡಿ ವಿವಿಧ ವಿಭಾಗಗಳಿಗೆ ಗರಿಷ್ಠ ಅಂಕ ನಿಗದಿಪಡಿಸಲಾಗಿತ್ತು. ಪ್ರಾಥಮಿಕ ಮಾನದಂಡಗಳಿಗೆ ಗರಿಷ್ಠ ೪ ಅಂಕ, ಪ್ರಮುಖ ಮೂಲ ಸೌಕರ್ಯಕ್ಕೆ ಗರಿ ಷ್ಠ ೬೪ ಅಂಕ, ಆರ್ಥಿಕ ಅಭಿವೃದ್ಧಿ ಮತ್ತು ಜೀವನಾಧಾರಕ್ಕೆ ಗರಿಷ್ಠ ೪ ಅಂಕ, ಆರೋಗ್ಯ, ಪೌಷ್ಟಿಕಾಂಶ ಮತ್ತು ನೈರ್ಮ ಲೀಕರಣಕ್ಕೆ ೧೮ ಅಂಕ, ಮಹಿಳಾ ಸಬಲೀಕರರಣಕ್ಕೆ ೭ ಅಂಕ, ಆರ್ಥಿಕ ಒಳ ಗೊಳ್ಳುವಿಕೆಗೆ ಗರಿಷ್ಠ ಮೂರು ಅಂಕ ಹೀಗೆ ಒಟ್ಟಾರೆ ೧೦೦ ಅಂಕಗಳಲ್ಲಿ ಮೌಲ್ಯ ಮಾಪನ ಮಾಡಲಾಗಿದೆ.

ಪಂಚಾಯತ್ ಆಡಳಿತ ಮಂಡಳಿಯ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಖುಷಿಯಾಗಿದೆ.ಪ್ರಶಸ್ತಿಯ ಮೂಲಕ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಭಾವಿಸುತ್ತೇನೆ. ನಮ್ಮ ಗ್ರಾಮಕ್ಕೆ ಪ್ರಶಸ್ತಿಯು ಸಿಗಲು ಕಾರಣಕರ್ತರಾದ ಎಲ್ಲಾ ಸಂಘ ಸಂಸ್ಥೆಗಳಿಗೆ,ಪಂಚಾಯತ್ ನ ಎಲ್ಲಾ ಸದಸ್ಯರಿಗೂ, ಸಿಬ್ಬಂದಿ ವರ್ಗದವರಿಗೂ,ವಿವಿಧ ಇಲಾಖೆಯ ಅಧಿಕಾರಿ ವರ್ಗದವರಿಗೂ ಸಮಸ್ತ ನಾಗರಿಕರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡಲು ನಿಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತೇನೆ.


– ಶ್ರೀಮತಿ ಶಕುಂತಳಾ ನಾಗರಾಜ್ ಅಧ್ಯಕ್ಷರು ಗ್ರಾ. ಪಂ.ಬೆಳ್ಳಾರೆ

“ಗ್ರಾಮ ಪಂಚಾಯತ್‌ನ ಆಸ್ತಿಗಳ ನಿರ್ವಹಣೆ, ಸಕಾಲದಲ್ಲಿ ತೆರಿಗೆಗಳ ಸಂಗ್ರಹ, ಸರಕಾರದ ಅನುದಾನಗಳ ಸಮರ್ಪಕ ಬಳಕೆ ಮೊದಲಾದ ಕಾರಣಕ್ಕಾಗಿ ಈ ಪ್ರಶಸ್ತಿ ಬಂದಿದೆ. ಗ್ರಾಮದ ಜನತೆ ನೀಡಿದ ಸಹಕಾರ ಮತ್ತು ಗ್ರಾ.ಪಂ. ಸಿಬ್ಬಂದಿಗಳ ಕಾರ್ಯವೈಖರಿಯಿಂದ ಇದು ಸಾಧ್ಯವಾಗಿದೆ. ಇದಕ್ಕಾಗಿ ಎಲ್ಲ ಜನತೆಗೆ ನಾವು ಕೃತಜ್ಞತೆ ಹೇಳಲಿಚ್ಛಿಸುತ್ತೇವೆ“


-ಜಿ.ಕೆ.ಹಮೀದ್, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.