HomePage_Banner
HomePage_Banner
HomePage_Banner
HomePage_Banner

ರಾಷ್ಟ್ರೀಯ ಕಬಡ್ಡಿ ಸೀನಿಯರ್ ತಂಡಕ್ಕೆ ಪಲ್ಲವಿ ಪೆರಾಜೆ ಆಯ್ಕೆ

ಪೆರಾಜೆ ಗ್ರಾಮದ ತೊಕ್ಕುಳಿ ಮನೆ ಕು. ಪಲ್ಲವಿಯವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ಕಳೆದ ಐದು ವರ್ಷಗಳಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯ ಸೀನಿಯರ್ ಮಹಿಳಾ ಕಬಡ್ಡಿ ತಂಡವನ್ನು ಪ್ರತಿನಿಧಿಸುತ್ತಿದ್ದು, ಇದೀಗ ತೆಲಂಗಾಣದ ಹೈದರಾಬಾದ್‌ನಲ್ಲಿ ಆರಂಭ ವಾಗಲಿರುವ ೬೫ ನೇ ರಾಷ್ಟ್ರೀಯ ಸೀನಿಯರ್ ಮಹಿಳೆಯರ ಕಬಡ್ಡಿ ಚಾಂಪಿಯನ್ ಶಿಪ್‌ಗೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾಳೆ . ಇವರು ಪೆರಾಜೆ ಗ್ರಾಮದ ತೊಕ್ಕುಳಿ ಮಾದಪ್ಪ ಹಾಗೂ ಸೀತಾ ಮಾದಪ್ಪ ದಂಪತಿಗಳ ಪುತ್ರಿಯಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಕೋಟೆ ಪೆರಾಜೆ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪ್ರಗತಿ ಕಾಣಿಯೂರು, ಪಿಯುಸಿ ಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದು, ಪ್ರಸ್ತುತ ಆಳ್ವಾಸ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿ. ಡಿ.೩೧ ರಿಂದ ಜ .೪ ರ ವರೆಗೆ ಹೈದರಾಬಾದ್‌ನಲ್ಲಿ ಪಂದ್ಯಾಟ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.