ಸುಬ್ರಹ್ಮಣ್ಯದಲ್ಲಿ ಸಿನಿಮಾ ನಟಿ ಮೇಲೆ ನೈತಿಕ ಪೊಲೀಸ್ ಗಿರಿ ಆರೋಪ: ಎಸ್ಪಿ ಸುಧೀರ್ ರೆಡ್ಡಿ ಸ್ಪಷ್ಟನೆ

ಚಿತ್ರನಟಿಯೊಬ್ಬಳು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ವೇಳೆ ಅನ್ಯಕೋಮಿನ ಹುಡುಗನ ಜೊತೆ ಇದ್ದ ಕಾರಣಕ್ಕೆ ನೈತಿಕ ಪೊಲೀಸ್‌ಗಿರಿ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಅವರು ಈ ಬಗ್ಗೆ ಸ್ಪಷ್ಟನೆ ನೀಡುತ್ತ ಡಿ.೨೦ರ ಮಧ್ಯಾಹ್ನ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಅನ್ಯಕೋಮಿನ ಹುಡುಗನ ಜೊತೆ ಯುವತಿ ರಾತ್ರಿ ಏಕಾಂಗಿಯಾಗಿ ಚಲಿಸುತ್ತಿದ್ದಾಳೆಂಬ ಸಾರ್ವಜನಿಕರ ದೂರು ಆಧರಿಸಿ ಯುವತಿಯನ್ನು ವಿಚಾರಣೆಗಾಗಿ ಸುಬ್ರಹ್ಮಣ್ಯ ಠಾಣೆಗೆ ಕರೆತರಲಾಯಿತು. ಈಕೆಯನ್ನು ವಿಚಾರಣೆಮಾಡಿದ ಸಂದರ್ಭದಲ್ಲಿ ಮನೆಯವರಿಗೇ ತಿಳಿಸದೇ ಆಕೆ ಬಂದಿರುವುದು ತಿಳಿದುಬಂದಿದೆ. ಆಗಸ್ಟ್ ತಿಂಗಳಲ್ಲಿ ಈಕೆ ಕಾಣೆಯಾಗಿದ್ದಾಳೆಂಬ ದೂರು ಕೂಡ ಮನೆಯವರು ದಾಖಲಿಸಿದ್ದರು. ಮರುದಿನ ಡಿ.೨೧ರಂದು ಸ್ಟೇಷನ್‌ಗೆ ಬಂದು ಯುವಕನೊಂದಿಗೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿರುವುದು ತಿಳಿದು ಬಂದಿದ್ದು, ಕಾನ್ಸ್‌ಟೇಬಲ್ ಮತ್ತು ಹೆಡ್‌ಕಾನ್ಸ್‌ಟೇಬಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಮಾತ್ರವಲ್ಲದೇ ಅನಂತರ ಹುಡುಗಿಯನ್ನು ಆಕೆಯ ತಂದೆಯೊಂದಿಗೆ ಮತ್ತು ಹುಡುಗನನ್ನು ಆತನ ಚಿಕ್ಕಪ್ಪನೊಂದಿಗೆ ಕಳುಹಿಸಿ ಕೊಡಲಾಗಿದೆ ಎಂದು ಸ್ಪಷ್ಟನೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.