ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವ ಆರಂಭಗೊಂಡಿದೆ. ಜ.೨ರಂದು ಬೆಳಿಗ್ಗೆ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ ಚಿದಾನಂದ, ಸಮಿತಿ ಸದಸ್ಯರುಗಳಾದ ಪಡ್ಡಂಬೈಲು ವೆಂಕಟ್ರಮಣ ಗೌಡ,
ಲಿಂಗಪ್ಪ ಗೌಡ ಕೇರ್ಪಳ, ಶ್ರೀಮತಿ ಎಮ್.ಮೀನಾಕ್ಷಿ ಗೌಡ, ಎನ್.ಎ.ರಾಮಚಂದ್ರ, ಎ.ರಮೇಶ್ ಬೈಪಡಿತ್ತಾಯ, ಕೃಪಾಶಂಕರ್ ತುದಿಯಡ್ಕ, ಡಾ.ಸಾಯೀಗೀತಾ, ಸುರೇಶ್ ಕುರುಂಜಿಭಾಗ್ ಮೊದಲಾದವರು ಇದ್ದರು. ಸಂಜೆ ಪನ್ನೆ ಬೀಡು ನಾಲ್ಕು
ಸ್ಥಾನಗಳ ದೈವಗಳ ಚಾವಡಿಯಿಂದ ಬಲ್ಲಾಳರ ಪಯ್ಯೋಳಿ ತಂದ ಬಳಿಕ ಕುಕ್ಕನ್ನೂರು ದೈವಗಳ ಭಂಡಾರ ಬಂದು ಧ್ವಜರೋಹಣ ನಡೆಯುವುದು.