HomePage_Banner
HomePage_Banner

ಕಾನತ್ತೂರು ಕಳಿಯಾಟ ಮಹೋತ್ಸವ ಸಂಪನ್ನ

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವವು ಡಿ. ೨೮ ರಿಂದ ಜ.೧ ರವರೆಗೆ ನಡೆಯಿತು. ಡಿ. ೨೭ರಂದು ಶುದ್ಧಿ ಕಲಶ, ಪ್ರಾರ್ಥನೆ, ದೈವಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆ ನಡೆಯಿತು. ಡಿ. ೨೮ರಂದು ಅಪರಾಹ್ನ ಭಂಡಾರ ಆಗಮನವಾಗಿ ರಾತ್ರಿ ಎಳೆಯೋರ್ ದೈವ ನಡೆಯಿತು. ಡಿ. ೨೯ರಂದು ಮುಂಜಾನೆ ಚಾಮುಂಡಿ ದೈವ, ಬೆಳಿಗ್ಗೆ ಪಂಜುರ್ಲಿ ದೈವ, ಸಂಜೆ ಮೂತೋರ್ ದೈವ, ರಾತ್ರಿ ಸಿಡಿಮದ್ದು ಪ್ರದರ್ಶನ, ಬಂಬೇರಿಯಾ, ಮಾಣಿಚ್ಚಿ ದೈವ ನಡೆಯಿತು. ಡಿ. ೩೦ರಂದು ಮುಂಜಾನೆ ಚಾಮುಂಡಿ ದೈವ, ಬೆಳಿಗ್ಗೆ ಕುಂಡಕಲೆಯ ದೈವಗಳ ಸಂಚಾರ, ಪಂಜುರ್ಲಿ ದೈವ, ರಾತ್ರಿ ಪಾಷಾಣಮೂರ್ತಿ ದೈವ ನಡೆಯಿತು. ಡಿ. ೩೧ರಂದು ಬೆಳಿಗ್ಗೆ ರಕ್ತೇಶ್ವರಿ ದೈವ, ತುಲಾಭಾರ, ಅಪರಾಹ್ನ ವಿಷ್ಣುಮೂರ್ತಿ ದೈವ ಪ್ರೇತ ವಿಮೋಚನೆ ನಡೆಯಿತು. ಸುಳ್ಯವೂ ಸೇರಿದಂತೆ ಕರ್ನಾಟಕ ಹಾಗೂ ಕೇರಳದ ವಿವಿಧ ಕಡೆಗಳಿಂದ ಸಾವಿರಾರು ಭಕ್ತಾಧಿಗಳು ಕಳಿಯಾಟ ಮಹೋತ್ಸವದಲ್ಲಿ ಪಾಲ್ಗೊಂಡರು. ಮ್ಯಾನೇಜಿಂಗ್ ಟ್ರಸ್ಟಿ ಕೆ.ಪಿ.ಗೋಪಾಲನ್ ನಾಯರ್, ಕಳಿಯಾಟ ಮಹೋತ್ಸವ ಪದಾಧಿಕಾರಿಗಳಾದ ಕೆ.ಪಿ.ಜ್ಯೋತಿಚಂದ್ರನ್ ನಾಯರ್, ಕೆ.ಪಿ.ಮುರಳೀಧರನ್ ನಾಯರ್, ಕೆ.ಪಿ. ಬಲರಾಮನ್ ನಾಯರ್, ಕೆ.ಪಿ.ಬಾಲಚಂದ್ರನ್ ನಾಯರ್, ಕೆ.ಪಿ.ಗೋಪಿಕೃಷ್ಣನ್ ನಾಯರ್, ಕೆ.ಪಿ.ವಿಶ್ವನಾಥನ್ ನಾಯರ್, ಕೆ.ಪಿ.ರಾಜೇಂದ್ರನ್ ನಾಯರ್ ಉಸ್ತುವಾರಿ ವಹಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.