HomePage_Banner
HomePage_Banner
HomePage_Banner
HomePage_Banner

ಸುಬ್ರಹ್ಮಣ್ಯ ಠಾಣೆಯಲ್ಲಿ ದೌರ್ಜನ್ಯದ ಆರೋಪ- ಇಬ್ಬರು ಪೊಲೀಸರ ಆಮಾನತು

ಸುಬ್ರಹ್ಮಣ್ಯದಲ್ಲಿ ಕಳೆದ ವಾರ ನಡೆದ ಚಿತ್ರ ನಟಿ ಮತ್ತು ಚಿತ್ರ ನಟ ಕುರಿತ ಪ್ರಕರಣಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಇಬ್ಬರು ಪೊಲೀಸರ ಅಮಾನತುಗೊಂಡಿದ್ದಾರೆ . ಸರ್ಪ ಸಂಸ್ಕಾರಕ್ಕೆಂದು ಬಂದಿದ್ದ ಬಹುಭಾಷಾ ಚಿತ್ರನಟಿ ಆಕೆ ಉಳಿದುಕೊಂಡಿದ್ದ ಛತ್ರದ ಕೊಠಡಿಗೆ ಸಹ ನಟ ಬೆಳ್ಳಾರೆಯ ಫರ್ವೇಝ್ ಒಂದೆರಡು ಭಾರೀ ಬಂದು ಹೋದನೆಂಬ ಕಾರಣಕ್ಕಾಗಿ ಸುಬ್ರಹ್ಮಣ್ಯಕ್ಕೆ ಪೊಲೀಸ್ ಠಾಣೆಗೆ ಮಾಹಿತಿ ಹೋಗಿ ಸುಬ್ರಹ್ಮಣ್ಯ ಪೊಲೀಸರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಆಕೆಯ ಪೋನ್‌ನಿಂದಲೇ ಫರ್ವೇಝ್‌ಗೆ ಪೋನ್ ಮಾಡಿಸಿ ಮರುದಿನ ಆತ ಸುಬ್ರಹ್ಮಣ್ಯ ಠಾಣೆಗೆ ಬರುವಂತೆ ಮಾಡಿದ್ದರು. ಆ ಸಂದರ್ಭದಲ್ಲಿ ಆತನಿಗೆ ಹಾಗೂ ಆಕೆಗೆ ಪೊಲೀಸರು ಹೊಡೆದಿದ್ದರು ಎನ್ನಲಾಗಿದೆ.
ಈ ವಿಚಾರದ ಕುರಿತು ತನ್ನ ಮೇಲೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಆಕೆ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿಕೊಂಡು ಘಟನೆಗೆ ಸ್ಪಷ್ಟೀಕರಣ ನೀಡಿದ್ದಳು. ಈ ಸೆಲ್ಫಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಳು. ಇದು ವೈರಲ್ ಆಗಿ ದ.ಕ ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯವರಿಗೆ ದೊರೆತು, ಅವರಿಗೆ ಹೊಡೆದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದರು.
ಆದರಂತೆ ಇದೀಗ ಸುಬ್ರಹ್ಮಣ್ಯ ಠಾಣಾ ಕಾನ್ಸ್‌ಸ್ಟೇಬಲ್ಗಳು ಪ್ರಶಾಂತ್‌ ಕುಮಾರ್ ಮತ್ತು ಸಂಧ್ಯಾ ಕುಮಾರಿಯವರ ಅಮಾನತು ಮಾಡಿದ್ದಾರೆ. 

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.