ಮುರುಳ್ಯ ದೇವರಕಾನ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ

ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ದೇವರಕಾನ ಇಲ್ಲಿ ೨ ವರ್ಷದ ಹಿಂದೆ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದು ನಿತ್ಯ ನೈಮಿತ್ತಿಕಗಳು, ಪಂಚ ಪರ್ವಗಳು ಹಾಗೂ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯುತ್ತಾ ಬರುತ್ತಿದೆ. ಪ್ರತೀ ಶನಿವಾರ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಹಾಗೂ ಪ್ರತೀ ಸಂಕ್ರಮಣಗಳಂದು ಗಣಪತಿ ಹವನ, ಸತ್ಯನಾರಾಯಣ ಪೂಜೆ, ಶ್ರೀದೇವರಿಗೆ ವಿಶೇಷ ಪೂಜೆ, ಮತ್ತು ವಿಶೇಷ ಸೇವಾದಿಗಳು ಮತ್ತು ಅನ್ನ ಸಂತರ್ಪಣೆ ನಡೆಯುತ್ತಿದೆ. ಅಷ್ಟ ಮಂಗಲ ಪ್ರಶ್ನೆ ಸಂದರ್ಭದಲ್ಲಿ ತಿಳಿಸಿದ ದೈವ ದೇವರುಗಳ ಸಾನಿಧ್ಯ ವಿಚಾರವಾಗಿ ಜ.೧ರಂದು ಕ್ಷೇತ್ರದ ದೈವಜ್ಞರಾದ ವಳಕ್ಕುಂಜ ವೆಂಕಟ್ರಮಣ ಭಟ್‌ರವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತ ನಡೆಯಿತು. ಈ ಸಂದರ್ಭದಲ್ಲಿ ಟ್ರಸ್ಟಿ ಅಧ್ಯಕ್ಷರಾದ ವಿಠಲ ರೈ ಪೋಳಾಜೆ, ಕಾರ‍್ಯದರ್ಶಿ ಜನಾರ್ಧನ ಅಲೆಕ್ಕಾಡಿ, ಉಪಾಧ್ಯಕ್ಷರಾದ ದೈವಜ್ಞ, ಕೇಶವ ಭಟ್ ಮಾನಸ ವನ, ಬಾಸ್ಕರ ಗೌಡ ನಳಿಯಾರು, ಖಂಜಾಜಿ ಡಾ. ರಾಮಚಂದ್ರ ಭಟ್, ಜೊತೆ ಕಾರ್ಯದರ್ಶಿ ಅನೂಪು ಬಿಳಿಮಲೆ, ಸದಸ್ಯರಾದ ಸುಂದರ ರೈ ಪೋಳಾಜೆ, ವಸಂತ ಕುಮಾರ್ ಗೌಡ ಮುರುಳ್ಯ, ರಾಮಕೃಷ್ಣ ಭಟ್ ಕಳತ್ತಜೆ, ನೀಲಮ್ಮ ಹುದೇರಿ, ವಿಶ್ವನಾಥ ರೈ ಕೊಂಕೋನಿಮೂಲೆ, ಸೋಮನಾಥ ಗೌಡ ಮೂಲ್ಯತ್ತಾರು, ಲಕ್ಷ್ಮಿ ನರಸಿಂಹ ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಕುಮಾರ್ ಎಮ್.ಬಿ, ಹಾಗೂ ಜಗದೀಶ ಹುದೇರಿ, ಲೋಕೆಶ್ ಮುರುಳ್ಯ, ಚಂದ್ರಶೇಖರ ಮೊಂಟಪಾದೆ, ಶೇಖರ್ ಸಾಲಿಯಾನ್,ಕೇಶವ್ ಜೋಯಿಸರು ಕರುವಾಜೆ,ಚೆನ್ನಪ್ಪ ಗೌಡ ಆಲೇಕಿ, ಜಗದೀಶ್ ತಂಬಿನಮಕ್ಕಿ, ಉತ್ಸವ ಸಮಿತಿ ಅಧ್ಯಕ್ಷ ದಿವಾಕರ ರೈ ಪೊಗ್ಗೋಲಿ, ಕಾರ‍್ಯದರ್ಶಿ ರಮೇಶ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ಸೂರ‍್ಯನಾರಾಯಣ ಭಟ್ ಶ್ರೀದೇವರಿಗೆ ವಿಶೇಷ ಪೂಜೆ ಸಮರ್ಪಿಸಿ ಪ್ರಸಾದ ವಿತರಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.