ಸುಳ್ಯ: ಹಿಂದಕ್ಕೆ ಚಲಿಸಿ ಬಸ್ ಸ್ಟಾಂಡ್ ಕಂಪೌಂಡ್‌ಗೆ ಗುದ್ದಿದ ಸರಕಾರಿ ಬಸ್

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್ ಹಿಮ್ಮಖವಾಗಿ ಚಲಿಸಿ, ಬಸ್ ನಿಲ್ದಾಣದ ಕಾಂಪೌಂಡ್‌ಗೆ ಗುದ್ದಿ ಹಾನಿಗೊಳಗಾದ ಘಟನೆ ಇಂದು ಬೆಳಿಗ್ಗೆ ೮.೩೦ ಸುಮಾರಿಗೆ ನಡೆದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಮರ್ಕಂಜಕ್ಕೆ ಹೋಗುವ ಬಸ್ ಚಾಲಕ ರಿವರ್ಸ್ ತೆಗಯುವಾಗ ಬಸ್ ಹಿಮ್ಮಖವಾಗಿ ಚಲಿಸಲಾರಂಬಿಸಿತು. ಬಸ್‌ನ ಚಾಲಕ ಬಸ್‌ನ್ನು ನಿಯಂತ್ರಣ ತರಲು ಪ್ರಯತ್ನಿಸಿದರೂ ಬಸ್ ಕಾಂಪೌಡ್‌ಗೆ ಗುದ್ದಿ ನಿಂತಿದೆ. ಕಾಂಪೌಂಡ್ ಕುಸಿದು ಆದರ ಕಲ್ಲುಗಳು ನಾವೂರು ಕಡೆಗೆ ಹೋಗುವ ಪಕ್ಕದ ರಸ್ತೆಗೆ ಬಿದ್ದಿದೆ. ರಸ್ತೆಯಲ್ಲಿ ಜನ ಸಂಚಾರ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.