ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಗೆ ಪ್ರಥಮ ರ‍್ಯಾಂಕ್

ಜೂನ್-ಜುಲೈ ೨೦೧೭ ರಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳಲ್ಲಿ ಬಿ.ಇ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸುಳ್ಯದ ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅರ್ಪಿತಾ ಕೆ.ಎಸ್. ಇವರು ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ದಾಖಲೆ ಅಂಕಗಳೊಂದಿಗೆ ೫ ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಪ್ರಸ್ತುತ ಇವರು ಕಾಲೇಜಿನ ಕ್ಯಾಂಪಸ್ ಆಯ್ಕೆ ವ್ಯವಸ್ಥೆಯ ಮೂಲಕ ಬೆಂಗಳೂರಿನ ಪ್ರತಿಷ್ಠಿತ “ತೋಟ್  ಪೋಕಸ್ “ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸುಳ್ಯದ ಹೈಟೆಕ್ ಕಂಪ್ಯೂಟರ್ ಸೆಂಟರ್‌ನ ಮಾಲಕರಾದ ಶ್ರೀಮತಿ ಕವಿತ ಮತ್ತು ಶ್ರೀ ಕೆ ಶಶಿಧರ ದಂಪತಿಗಳ ಸುಪುತ್ರಿ. ಇವರ ಅದ್ವಿತೀಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರಾದ ಪ್ರೊ. ಉಜ್ವಲ್ ಯು.ಜೆ ಹಾಗೂ ಶಿಕ್ಷಕ-ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ. ಕೆ.ವಿ.ಜಿ. ಚಿನ್ನದ ಪದಕವನ್ನೂ ತನ್ನ ಮುಡಿಗೇರಿಸಲಿರುವ ಇವರನ್ನು ಕಾಲೇಜಿನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯವರಾದ ಡಾ. ರೇಣುಕಾ ಪ್ರಾಸಾದ್ ಕೆ.ವಿ ಹಾಗೂ ಪ್ರಾಂಶುಪಾಲರಾದ ಡಾ. ಎನ್. ಎ ಜ್ಞಾನೇಶ್ ಅಭಿನಂದಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.