HomePage_Banner
HomePage_Banner
HomePage_Banner
Breaking News

ಪನ್ನೆಬೀಡು ಶ್ರೀಭಗವತಿ ದೇವಸ್ಥಾನದ ಕುರಿತು ವಿಶೇಷ ವರದಿ

ಪನ್ನೆಬೀಡು ಶ್ರೀಭಗವತಿ ದೇವಸ್ಥಾನವು ಸುಳ್ಯದ ಪ್ರಮುಖ ದೇವಾಲಯವಾಗಿರುವ ಶ್ರೀಚೆನ್ನಕೇಶವ ದೇವಸ್ಥಾನದ ಆಡಳಿತಕ್ಕೊಳಪಟ್ಟ ಆರಾಧ್ಯ ನಿಲಯ ಚೆನ್ನಕೇಶವ ದೇವಸ್ಥಾನಕ್ಕೂ ಪನ್ನೇಬಿಡು ಭಗವತಿ ದೇವಸ್ಥಾನಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಈ ಪನ್ನೆಬೀಡು ಭಗವತಿ ದೇವಸ್ಥಾನವನ್ನು ಬಲ್ಲಾಳರಸರ ಆಡಳಿತದ ಸಮಯದಲ್ಲಿ ಕಾರ್ಯರೂಪಕ್ಕೆ ತರಲಾಯಿತು.
ಕೇರಳದ ಗಾಣಿಗ ಜನಾಂಗದವರಿಂದ ಈ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಸಾಂಗವಾಗಿ ನೆರವೇರುತ್ತಿದೆ. ಪ್ರತಿವರ್ಷ ಜನವರಿ ೫ರಂದು ಶ್ರೀಭಗವತಿ ಸ್ಥಾನದಲ್ಲಿ ಪ್ರತಿಷ್ಠಾದಿನ ಹಾಗೂ ಮಹಾಪೂಜೆಯು ನಡೆಯುತ್ತಿದೆ.
ಈ ದೇವಸ್ಥಾನದ ವಿಶೇಷತೆ ಹಾಗೂ ಇತಿಹಾಸದ ಕುರಿತು ಅನುವಂಶಿಕ ಆಡಳಿತ ಮೊಕ್ತೇಸರಾದ ಡಾ. ಹರಪ್ರಸಾದ್ ತುದಿಯಡ್ಕ ಅವರು ತಿಳಿಸಿದರು.
ಈ ಬೂಡು ಪ್ರದೇಶವು ಸುಮಾರು ೨ ಎಕರೆ ಪ್ರದೇಶವನ್ನೊಳಗೊಂಡಿದೆ. ಮಜಲಿಗೆ ಹೊಂದಿಕೊಂಡೆ ಒಂದು ಉದ್ದವಾದ ಮೊಗಸಾಲೆ ಇದೆ. ಈ ಮೊಗಸಾಲೆಯ ಮಧ್ಯಭಾಗದಲ್ಲಿ ಮಿತ್ತೂರು ನಾಯರ್ ದೈವದ ಭಂಡಾರ ಇಡುವ ಪೀಠವೊಂದಿದೆ. ಇದರ ಪಕ್ಕದಲ್ಲಿಯೇ ಭಸ್ಮ ಕುಂಡವೊಂದರ ಕುರುಹುಗಳು ಇವೆ. ಕೆಂಪು ಕಲ್ಲಿನಿಂದ ಕಟ್ಟಿರುವ ಬೂಡಿನ ಮೊಗಸಾಲೆಯ ಕಂಬಗಳು ಆಕರ್ಷಣೆಯಾಗಿದೆ.
ಇಲ್ಲಿ ಕಾಣಸಿಗುವ ನಾಲ್ಕು ಸೂತ್ರದ ಮನೆಯ ಮಧ್ಯಭಾಗದಲ್ಲಿ ಚೌಕಕಾರದ ಪೀಠವೊಂದಿದೆ. ಅದುವೇ ಶ್ರೀಭಗವತಿ ಅಮ್ಮನವರ ಸಾನಿಧ್ಯವೆಂದು ಅಷ್ಠಮಂಗಳ ಪ್ರಶ್ನೆಯಿಂದ ತಿಳಿದು. ಬಂದಿದೆ. ಈ ದೇವಸ್ಥಾನದ ಇನ್ನೊಂದು ವಿಶೇಷವೆಂದರೇ ವಾಲಸಿರಿ ಮಜಲು. ಇದು ಸುಮಾರು ೩ಮುಡಿ ಭತ್ತದ ಗದ್ದೆಯಾಗಿದೆ. ಈ ಮಜಲಿನಲ್ಲಿ ಯಾವುದೇ ಬೆಳೆಯನ್ನು ಬೆಳೆಯಲಾಗುವುದಿಲ್ಲ. ಬೆಳೆಯಬಾರದು ಎನ್ನುವ ಕಟ್ಟಳೆಯು ಸಹ ಇದೆ. ದೇವಸ್ಥಾನದಲ್ಲಿ ನಡೆಯುವ ಪೂಜಾ ಕೈಂಕರ್ಯಗಳ ಬಗ್ಗೆ ಬೂಡು ರಾಧಕೃಷ್ಣ ಅವರು ವಿವರಿಸಿದರು.

ಚೆನ್ನಕೇಶವ ಜಾತ್ರೋತ್ಸವ ದಿನ ಬರುವ ಎಲ್ಲಾ ಬಂಡಾರಗಳು ಬೂಡಿಗೆ ಸಂದರ್ಶಿಸಬೇಕೆಂಬ ಸಂಪ್ರದಾಯ ಹಿಂದೆ ಇತ್ತು. ಬೂಡನ್ನು ಬದಿಗಿಟ್ಟು ನಡೆಸುವ ಜಾತ್ರಾಮಹೋತ್ಸವವು ಅಪೂರ್ಣವೆಂಬ ನಂಬಿಕೆಯೇ ಬಲ್ಲಾಳರ ಬೂಡು ಮತ್ತು ಚೆನ್ನಕೇಶವ ಸ್ವಾಮಿಯ ಬಗ್ಗೆ ಒಂದು ಭಾವನಾತ್ಮಕ ಸಂಬಂಧ ಬೆಳೆಯುವಂತೆ ಮಾಡಿದೆ. ವಿಸ್ತಾರವಾಗಿರುವ ಬಲ್ಲಾಳರ ಬೂಡು ಪ್ರದೇಶವು ಅಷ್ಟೊಂದು ವೈಭವೋಪೇತವಾಗಿಲ್ಲದಿದ್ದರೂ ಸಹ ತನ್ನ ಪ್ರಾಧಾನ್ಯತೆಯನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವುದು ಮಾತ್ರ ವಿಶೇಷವಾಗಿದೆ.

ಈ ದೇವಸ್ಥಾನದ ಆಡಳಿತದ ಕುರಿತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದ ಮಾತನಾಡಿದು ಈ ರೀತಿ

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.