Breaking News

ಬೆಳ್ಳಾರೆ ಕೊಳಂಬಳದಲ್ಲಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬೆಳ್ಳಾರೆ ಗ್ರಾಮದ ಉಮಿಕ್ಕಳ (ಕೊಳಂಬಳ) ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ರಕ್ತೇಶ್ವರಿ ದೇವಿ ವರ್ಣಾರ ಪಂಜುರ್ಲಿ, ಕಲ್ಲುರ್ಟಿ , ಕುಪ್ಪೆ ಪಂಜುರ್ಲಿ , ಹಾಗೂ ಗುಳಿಗ ದೈವಗಳ ನೇಮೋತ್ಸವವು ವೇದಮೂರ್ತಿ ಶ್ರೀ ರಾಘವೇಂದ್ರ ಪ್ರಸಾದ ಶಾಸ್ತ್ರಿ ಮುಕ್ಕೂರು ಇವರ ನೇತೃತ್ವದಲ್ಲಿ ಜ.೬ ಮತ್ತು ೭ ರಂದು ವಿಜೃಂಭಣೆಯಿಂದ ನಡೆಯಿತು. ಜ.೭ ರಂದು ರಾತ್ರಿ ಗಂಟೆ ೮.೦೦ ಕ್ಕೆ ಅನ್ನಸಂತರ್ಪಣೆ, ರಾತ್ರಿ ೮.೩೦ ಕ್ಕೆ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು. ರಾತ್ರಿ ಗಂಟೆ ೧೦.೩೦ ಕ್ಕೆ ಕುಪ್ಪೆಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ದಿವಾಕರ ರೈ ಮರಿಕೇಯಿ, ಸದಸ್ಯರಾದ ವಿಶ್ವನಾಥ ಕೆ, ಯೋಗೀಶ ಕೊಳಂಬಳ, ವಸಂತ ಬೋರ್ಕರ್,ಡಿ.ವಿಜಯ ರೈ, ಶಿವರಾಮ ಶೆಟ್ಟಿ, ಸಂಜೀವ ಕಲಾಯಿ ,ಗೋವರ್ಧನ ಬೆಳ್ಳಾರೆ,ಯು ರಾಮಕೃಷ್ಣ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಕ್ತಾಭಿಮಾನಿಗಳು ಸೇರಿದ್ದರು.
ಹೈಲೈಟ್ಸ್
*ಬೆಳ್ಳಾರೆ ಮೇಲಿನ ಪೇಟೆಯಿಂದ ದೈವಸ್ಥಾನದವರೆಗೆ ರಸ್ತೆಯ ಎರಡು ಬದಿಗಳನ್ನು ತೋರಣ ಹಾಗೂ ಲೈಟಿಂಗ್ಸ್‌ಗಳಿಂದ ಅಲಂಕರಿಸಲಾಗಿತ್ತು.
*ದೈವಸ್ಥಾನವನ್ನು ಸುಂದರವಾಗಿ ಹೂವಿನಿಂದ ಮತ್ತು ಲೈಟಿಂಗ್ಸ್‌ನಿಂದ ಅಲಂಕರಿಸಲಾಗಿತ್ತು.
*ಸುಡುಮದ್ದಿನ ಪ್ರದರ್ಶನ ಅತ್ಯಾಕರ್ಷಕವಾಗಿತ್ತು.
*ಸುಸಜ್ಜಿತವಾದ ವಾಹನದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
*ಆಗಮಿಸಿದ ಎಲ್ಲಾ ಭಕ್ತಾಭಿಮಾನಿಗಳಿಗೆ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು
*ಸ್ವಯಂ ಸೇವಕರು ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.