ಸುಳ್ಯ ಶ್ರೀರಾಮಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಗ್ರಾಹಕರು ಅಧಿಕ ಸಂಖ್ಯೆಯಲ್ಲಿರುವುದರಿಂದ ದಿನದ ಕೆಲವು ಗಂಟೆ ಬ್ಯಾಂಕ್ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ. ಇದರಿಂದಾಗಿ ಗ್ರಾಹಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಸೃಷ್ಠಿಯಾಗಿದೆ. ಅವರು ಕುಳಿತುಕೊಳ್ಳಲು ಮಿತಪ್ರಮಾಣದ ಆಸನ ವ್ಯವಸ್ಥೆ ಇದೆ. ಹಿಂದೆ ಸುಳ್ಯದ ರಥಬೀದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಮತ್ತು ಶ್ರೀರಾಮಪೇಟೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ಇತ್ತು. ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿಲೀನಗೊಂಡ ಬಳಿಕ ಎಸ್.ಬಿ.ಐ.ನ ಎರಡುಶಾಖೆಗಳು ಸುಳ್ಯದಲ್ಲಿ ಇರುವಂತಾಗಿತ್ತು. ಎರಡು ವಾರಗಳ ಹಿಂದೆ ರಥಬೀದಿಯಲ್ಲಿದ್ದ
ಎಸ್.ಬಿ.ಐ ಶಾಖೆಯನ್ನು ಶ್ರೀರಾಮಪೇಟೆಯಲ್ಲಿರುವ ಶಾಖೆಯಲ್ಲಿ ವಿಲೀನಗೊಳಿಸಿದ್ದರಿಂದ, ಮೊದಲೇ ಜನನಿಬಿಡವಾಗಿದ್ದ ಸ್ಟೇಟ್ ಬ್ಯಾಂಕ್ ಮತ್ತಷ್ಟು ನಿಬಿಡವಾಯಿತು. ಇದರ ಪರಿಣಾಮವಾಗಿ ಗ್ರಾಹಕರ ಸಂಖ್ಯೆ ಅಧಿಕವಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ.ಹಿರಿಯ ನಾಗರಿಕರಿಗೆ ಪ್ರತ್ಯೇಕ ಕ್ಯೂನ ವ್ಯವಸ್ಥೆಯು ಸಹ ಪ್ರಸ್ತುತ ಬ್ಯಾಂಕ್ನಲ್ಲಿ ಲಭ್ಯವಿಲ್ಲ ಎಂದು ದೇರಣ್ಣಗೌಡ ಅಡ್ಡಂತಡ್ಕ ತಿಳಿಸಿದರು.
ಬೈಟ್ ದೇರಣ್ಣಗೌಡ
ಈ ಸಮಸ್ಯೆಯ ಕುರಿತು ಬ್ಯಾಂಕ್ ಮ್ಯಾನೇಜರ್ರೊಡನೆ ಮಾತನಾಡಲು ಹೋದಾಗ ಅವರು ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದರು. ಸಮಸ್ಯೆ ಪರಿಹರಿಸುತ್ತೇವೆ ಎಂದಷ್ಟೆ ಹೇಳಿದರು. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಯಾವ ರೀತಿ ಪರಿಹಾರವಾಗುತ್ತದೆ ಎಂದು ಕಾದು ನೋಡಬೇಕು.
Wow namma suddi
tnq sir