HomePage_Banner
HomePage_Banner

ನೆಹರೂ ಮೆಮೋರಿಯಲ್‌ ಕಾಲೇಜು: ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನ ಎನ್.ಸಿ.ಸಿ ಕೆಡೆಟ್‌ ಅಂತಿಮ ಬಿ.ಕಾಂ ವಿದ್ಯಾರ್ಥಿ ಕೃತೇಶ್ ಮದುವೆ ಗದ್ದೆ ನವ ದೆಹಲಿಯಲ್ಲಿ ೨೬ ಜನವರಿ ೨೦೧೮ ರಂದು ನಡೆಯಲಿರುವ ಪ್ರತಿಷ್ಟಿತ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾಗಿದ್ದು, ಕರ್ನಾಟಕ ಮತ್ತು ಗೋವಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳಒಟ್ಟು ೪೪,೦೦೦ ಎನ್.ಸಿ.ಸಿ ಕೆಡೆಟ್‌ಗಳಲ್ಲಿ ಅಂತಿಮವಾಗಿ ೧೦೬ ಕೆಡೆಟ್‌ಗಳು ಕರ್ನಾಟಕ ಮತ್ತು ಗೋವಾ ರಾಜ್ಯದಿಂದಆಯ್ಕೆಯಾಗಿರುತ್ತಾರೆ. ಈ ತಂಡದ ನಾಯಕನಾಗಿ ಭಾಗವಹಿಸುವ ಅವಕಾಶ ಕಾಲೇಜಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕೃತೇಶ್‌ ಅವರಿಗೆ ಲಭಿಸಿದೆ.

ಈಗಾಗಲೇ ಎನ್.ಸಿ.ಸಿಯಲ್ಲಿ ಹಲವಾರು ಶಿಬಿರಗಳಲ್ಲಿ ಭಾಗವಹಿಸಿದುದಲ್ಲದೇ ಗಣರಾಜ್ಯೋತ್ಸವ ದಪಥಸಂಚಲನಕ್ಕೆ ಆಯ್ಕೆಯಾಗಲು ಒಕ್ಟೋಬರ್ ೨೦೧೭ರಿಂದ ಡಿಸೆಂಬರ್೨೦೧೭ರ ತನಕ ಮೂಡಬಿದಿರೆ, ಮೈಸೂರು, ಬೆಂಗಳೂರು, ಗೋವಾ ಮುಂತಾದ ಕಡೆಗಳಲ್ಲಿ ನಡೆದ ೭ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಿರುತ್ತಾರೆ. ಅತ್ಯುತ್ತಮ ವಾಲಿಬಾಲ್ ಆಟಗಾರರಾಗಿರುವ ಇವರು ಸ್ನೇಹ ಶಿಕ್ಷಣ ಸಂಸ್ಥೆ, ಕೆ.ವಿ.ಜಿ ಹೈಸ್ಕೂಲ್, ಎನ್.ಎಂ.ಪಿ.ಯು.ಸಿ ಸುಳ್ಯ ಇಲ್ಲಿಯ ಹಿರಿಯ ವಿದ್ಯಾರ್ಥಿ ಹಾಗೂ ಅಲೆಟ್ಟಿಯ ನೂಜಿನ ಮೂಲೆ ಮದುವೆಗದ್ದೆ ಚಿದಾನಂದ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ. ಹಾಗೂ ದಿ.ರಾಮಕೃಷ್ಣ ಕೊಯಿಂಗಾಜೆಯವರ ಮೊಮ್ಮಗ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.