ಸುಳ್ಯದ ಕೆ.ವಿ.ಜಿ. ವಿದ್ಯಾ ಸಂಸ್ಥೆಗಳ ವತಿಯಿಂದ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಜಾತ್ರೋತ್ಸವ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ನೀಡುವ ಕಾರ್ಯಕ್ರಮ ಇಂದು ನಡೆಯಿತು.
ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾ ಪ್ರಸಾದ್ ಮತ್ತು ಅಕಾಡೆಮಿ ನಿರ್ದೆಶಕ ಅಕ್ಷಯ್ ಕೆ.ಸಿಯವರ ನೇತೃತ್ವದಲ್ಲಿ ಕ್ಯಾಂಪಸ್ನಿಂದ ಹೊರಟ ಹಸಿರುವಾಣಿ
ಹೊರೆಕಾಣಿಕೆಯ ಮೆರವಣಿಗೆಯು ವಿವೇಕಾನಂದ ಸರ್ಕಲ್ , ಮೊಳಹಳ್ಳಿ ಶಿವರಾವ್ ರಸ್ತೆ, ಶ್ರೀ ರಾಮ್ ಪೇಟೆ, ಬಾಳೆ ಮಕ್ಕಿ ಬಸ್ ನಿಲ್ಧಾಣ, ರಥ ಬೀದಿ ಮೂಲಕ ಚೆನ್ನಕೇಶವ ದೇವಾಲಯ ತಲುಪಿತು.