HomePage_Banner
HomePage_Banner
HomePage_Banner
Breaking News

ಶ್ರೀ ಭುವನೇಶ್ವರಿ ಯಕ್ಷಗಾನ ಕಲಾಮಂಡಳಿ ಯಕ್ಷೋತ್ಸವ ಮತ್ತು ಸಾಧಕರಿಗೆ ಸನ್ಮಾನ

ಶ್ರೀ ಭುವನೇಶ್ವರಿ ಯಕ್ಷಗಾನ ಕಲಾಮಂಡಳಿ ಸುಳ್ಯ ಇದರ ಯಕ್ಷಗಾನ ನಾಟ್ಯ ತರಬೇತಿ ವಿದ್ಯಾರ್ಥಿಗಳಿಂದ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡ ಕಲಾವೇದಿಕೆಯಲ್ಲಿ ೨೦೧೭-೧೮ನೇ ಸಾಲಿನ ಯಕ್ಷೋತ್ಸವವು ಜ. ೭ ಮತ್ತು ೮ರಂದು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಜ.೭ರಂದು ಸುಳ್ಯ ನ.ಪಂ.ನ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇರರಾದ ಡಾ. ಹರಪ್ರಸಾದ್ ತುದಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ಉಪಸ್ಥಿತರಿದ್ದರು. ಎಸ್.ಕೆ.ಎಫ್.ಲಿಮಿಟೆಡ್ ಬೆಂಗಳೂರು ಇದರ ಮ್ಯಾನೇಜರ್ ಪುಟ್ಟಣ್ಣ ಮುಳ್ಯ ಇವರನ್ನು ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು. ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿಯ ಸಂಸ್ಥಾಪಕ ಕೋಡ್ಲ ಗಣಪತಿ ಭಟ್ ಸ್ವಾಗತಿಸಿದರು. ಜನಾರ್ದನ ಕಣಕ್ಕೂರು ಪ್ರಸ್ತಾವನೆಗೈದರು. ಡಾ. ಪ್ರಭಾಕರ ಶಿಶಿಲರವರು ಸನ್ಮಾನಿತರ ಪರಿಚಯ ವಾಚಿಸಿದರು. ದಯಾನಂದ ಪತ್ತುಕುಂಜ ಕಾರ್ಯಕ್ರಮ ನಿರೂಪಿಸಿದರು. ಕಲಿಕಾ ವಿದ್ಯಾರ್ಥಿಗಳಿಂದ ವೀರ ಲವ ಕುಶ, ರಾಣಿ ಶಶಿಪ್ರಭೆ, ಕದಂಬ ಕೌಶಿಕೆ ಯಕ್ಷಗಾನ ಪ್ರದರ್ಶನಗೊಂಡಿತು.
ಜ.೮ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಉದ್ಯಮಿಗಳಾದ ಉಪೇಂದ್ರ ಕಾಮತ್ ವಿನೋಬಾನಗರ ಅಡ್ಕಾರ್ ಇವರನ್ನು ಮತ್ತು ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕರವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಮಂಡಳಿಯ ಪರವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬೆಳಾಲು ಎಸ್.ಡಿ.ಎಂ ಪ್ರೌಢಶಾಲೆಯ ಮುಖ್ಯಗುರುಗಾಳಾದ ರಾಮಕೃಷ್ಣ ಭಟ್ ಚೂಂತಾರು ಅಭಿನಂದನಾ ಭಾಷಣವನ್ನು ಮಾಡಿದರು. ಡಾ.ಪ್ರಭಾಕರ ಶಿಶಿಲರವರು ಸಮಾರೋಪ ಭಾಷಣಗೈದರು. ಮಂಡಳಿಯ ಸಂಸ್ಥಾಪಕ ಕೋಡ್ಲ ಗಣಪತಿ ಭಟ್ ಸ್ವಾಗತಿಸಿದರು. ಸುದ್ದಿಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್‌ರವರು ವಂದಿಸಿದರು. ಜನಾರ್ದನ ಕಣಕ್ಕೂರು ಕಾರ್ಯಕ್ರಮ ನಿರೂಪಿಸಿದರು. ಕಲಿಕಾ ವಿದ್ಯಾರ್ಥಿಗಳಿಂದ ಬಬ್ರುವಾಹನ, ಸಹಸ್ರ ಭೂಭುಜ, ನರಕಾಸುರ ಮೋಕ್ಷ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.