ಪಂಜ ಸಮೀಪದ ನೆಕ್ಕಿಲ ಬಳಿ ನಿನ್ನೆ ಸಂಜೆ ಹೊತ್ತಿಗೆ ಕಾಡಾನೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಕಾಡಿನಿಂದ ನಾಡಿಗೆ ಬಂದ ಆನೆ ನೆಕ್ಕಿಲ ಪರಿಸರ ಹಾಗೂ ಪೈಂದೋಡಿ ದೇವಸ್ಥಾನ ಮತ್ತು ಜೂನಿಯರ್ ಕಾಲೇಜು ಸಮೀಪದ ಸ್ಥಳಗಳಲ್ಲಿ ಕಾಣಿಸಿಕೊಂಡು ಅಡ್ಡಾಡಿದೆ. ಕಾಡಿನಂಚಿನ ಜನವಸತಿ ಪ್ರದೇಶದಲ್ಲಿ ಸಂಚರಿಸಿ ಸ್ಥಳೀಯರಲ್ಲಿ ಭಯ ಉಂಟುಮಾಡಿದೆ. ಸ್ಥಳೀಯರು ಆನೆಯನ್ನು ಸಮೀಪದಿಂದ ಕಂಡಿದ್ದಾರೆ. ಬಳಿಕ ಆನೆಯು ಕಾಡಿನತ್ತ ತೆರಳಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿದ್ದಾರೆ.