Breaking News

ಪೆರುವಾಜೆ ದೇವಸ್ಥಾನದಲ್ಲಿ ಜಾತ್ರೋತ್ಸವದ ಗೊನೆ ಮುಹೂರ್ತ

ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವವು ಜ.೧೬ ರಿಂದ ಜ.೨೧ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಗೊನೆ ಮುಹೂರ್ತವು ಜ. ೧೦ರಂದು ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯವನ್ನು ನೆರವೇರಿಸಿದ್ದರು.

 ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ್ ಶೆಟ್ಟಿ ಪಾಲ್ತಾಡು, ಸದಸ್ಯರಾದ ಕರುಣಾಕರ ಗೌಡ, ದೇವಕಿ ಪೂವಪ್ಪ ಪೂಜಾರಿ, ಬೋಜರಾಜ ಶೆಟ್ಟಿ ಕಲ್ಕಂಪ್ಪಾಡಿ ಗುತ್ತು, ಮಹಾಲಿಂಗ ನ್ಯಾಕ ಪೆಲತ್ತಡ್ಕ, ಕಿಶೋರ್ ಕುಮಾರ್ ಪೆರುವಾಜೆ, ಅಂಗಾರ ಬಜ, ಶ್ರೀಮತಿ ಲೀಲಾವತಿ ಎ, ಶೆಟ್ಟಿ ಹಾಗೂ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ವೆಂಕಟಕೃಷ್ಣ ರಾವ್, ಅಮರನಾಥ ಶೆಟ್ಟಿ ಪೆರುವಾಜೆ ಗುತ್ತು, ನಿತೀನ್ ರಾಜ್ ಶೆಟ್ಟಿ, ಸದಾಶಿವ, ಸುನೀಲ್ ಪೂಜಾರಿ, ವಸಂತ, ಕೇಶವಮೂರ್ತಿ ಕಾವಿನಮೂಲೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *