Breaking News

ಪಂಜ: ಗಾಯಗೊಂಡ ನವವಿವಾಹಿತೆ ಮೃತ್ಯು

ಕಡಬದ ಸಂತೆ ಕಟ್ಟೆ ಬಳಿಯ ಕಟ್ಟಡಕ್ಕೆ ಡಿ.೨೬.ರಂದು ರಾತ್ರಿ ಪಂಜ ಸಮೀಪದ ಕರಿಕ್ಕಳದ ಕಾರು ಡಿಕ್ಕಿ ಹೊಡೆದು ನವವಿವಾಹಿತೆ ಗಂಭೀರ ಗಾಯ ಗೊಂಡಿದ್ದರು. ಆದರೆ ಚಿಕಿತ್ಸೆಗೆ ಫಲಿಸದೆ ಜ.೮.ರಂದು ಯುವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪಂಬೆತ್ತಾಡಿ ಗ್ರಾಮದ ಮೂಳೂರು ಫಾರ್ಮ್ಸ್ ಶ್ರೀಶ ಎಂಬವರ ಪತ್ನಿ ಸಂಧ್ಯಾ (೨೦ವ) ಮೃತ ಪಟ್ಟವರು.ಮಡಂತ್ಯಾರು ಸಂಬಂಧಿಕರ ಮನೆಯಲ್ಲಿ ಕಾರ‍್ಯಕ್ರಮ ಮುಗಿಸಿ ಕರಿಕ್ಕಳದ ಮನೆ ಕಡೆ ಬರುತ್ತಿದ್ದಾಗ ಅಪಘಾತ ನಡೆದಿದೆ. ತಕ್ಷಣ ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದ ಶ್ರೀಶ ,ಅವರ ಪತ್ನಿ ಸಂಧ್ಯಾ ,ಶ್ರೀಶ ರ ತಾಯಿ ಸತ್ಯವತಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರ ಗಾಯ ಗೊಂಡ ಸಂಧ್ಯಾ ಮೃತಪಟ್ಟಿದ್ದಾರೆ. ಶ್ರೀಶ ,ಅವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಸತ್ಯವತಿಯವರ ಕತ್ತಿನ ಭಾಗಕ್ಕೆ ಗಾಯವಾಗಿದ್ದು ಈಗ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ಕೋಡಿಮುಗೇರು ಉದಯಶಂಕರ ಭಟರ ಪುತ್ರಿ ಸಂಧ್ಯಾ ಅವರೊಂದಿಗೆ ಶ್ರೀಶ ರ ವಿವಾಹವು ಡಿ.೧೧.ರಂದು ನಡೆದಿತ್ತು.

About The Author

Related posts

Leave a Reply

Your email address will not be published. Required fields are marked *