ಅರೆಭಾಷೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ಅರೆಬಾಷೆ ಬಾಷಾ ಸೌಹಾರ್ದ ಸಂಭ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಅರೆಬಾಷೆ ಬಾಷಾ ಸಾಹೌರ್ಧ ಸಂಭ್ರಮ ಹಾಗೂ ಅಕಾಡೆಮಿಯ ನೂತನ ಅಧ್ಯಕ್ಷ ಮತ್ತು ಸದಸ್ಯರುಗಳಿಗೆ ಅಭಿನಂದನೆ ಸಮಾರಂಭ ಜ.೨೨ರಂದು ಸುಳ್ಯದ ದುರ್ಗಾಪರಮೆಶ್ವರೀ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ನೂತನ ಅಧ್ಯಕ್ಷ ಪಿ.ಸಿ.ಜಯರಾಮ್ ತಿಳಿಸಿದರು. ಜ.೧೨ರಂದು ಸುಳ್ಯದ ಕೊಡಿಯಾಬೈಲುನಲ್ಲಿರಯವ ಗೌಡ ಸಮುದಾಯ ಭವನದಲ್ಲಿ ಪತ್ರಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು. ಕಾರ್ಯಕ್ರಮವನ್ನು ಜಿಲ್ಲೆಯ ಉಸ್ತುವಾರಿ ಸಚಿವ ಎ.ರಮನಾಥ ರೈ ಉದ್ಘಾಟಸಲಿದ್ದಾರೆ. ಅರೆಬಾಷೆ ಅಕಾಡೆಮಿಯ ಅಧ್ಯಕ್ಷ  ಪಿ.ಸಿ. ಜಯರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಗು ಜಿಲ್ಲಾ ಉಸ್ತುವರಿ ಸಚಿವ ಎಮ್.ಆರ್ ಸೀತರಾಮ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಶಾಸಕರುಗಳಾದ ಕೆ.ಜಿ ಬೋಪಯ್ಯ, ಎಸ್. ಅಂಗಾರ, ಎ.ಎಲ್.ಓ.ಎ. ಅಧ್ಯಕ್ಷ ಡಾ. ಕೆ.ವಿ ಚಿದಾನಂದ್, ಅರೆಭಾಷೆ ಅಕಾಡಮಿಯ ಮಾಜಿ ಅಧ್ಯಕ್ಷರುಗಳಾದ ಎನ್.ಎಸ್. ದೇವಿಪ್ರಸಾದ್, ಕೊಲ್ಯದ ಗಿರೀಶ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌಡ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಶೇಖರ್ ಪೇರಾಲು ಉಪನ್ಯಾಸ ನೀಡಲಿದ್ದಾರೆ. ಬಳಿಕ ಅರೆಭಾಷೆ, ಕನ್ನಡ, ಕೊಡವ, ಬ್ಯಾರಿ, ತುಳು, ಕೊಂಕಣಿ, ಬಾಷೆಯಲ್ಲಿ ಬಹುಭಾಷಾ ಕವಿಗೋಷ್ಟಿ ನಡೆಯಲಿದೆ. ಬಳಿಕ ಅರೆಬಾಷೆ ಸಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಎಂದು ಪಿ.ಸಿ. ಜಯರಾಮ ತಿಳಿಸಿದರು.
ಅಕಾಡೆಮಿಯ ಯೋಜನೆ: ಮುಂದಿನ ದಿನಗಳಲ್ಲಿ ಅರೆಬಾಷೆ ಸಾಹಿತ್ಯವನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕಗಳ ಪ್ರಕಟಣೆ, ಪದಕೋಶ, ಭಾಷಾಂತರ , ಡಾಕ್ಯುಮೆಂಟ್ರಿ ಇತ್ಯಾದಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಅರೆಭಾಷೆ ಸಹಿತಿಗಳಿಗಾಗಿ ವಿಚಾರ ಸಂಕಿರಣ, ಸಾಹಿತ್ಯ ಶಿಬಿರ ಕವಿಗೋಷ್ಠಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಯೋಚನೆಗಳಿವೆ. ಹಾಗೆಯೇ ಪುಸ್ತಕ ಬಹುಮಾನಗಳು, ತ್ರೈಮಾಸಿಕ ಸಂಚಿಕೆ ಪ್ರಕಟಣೆ ಮುಖ್ಯವಾಗಿ ಅರೆಭಾಷೆ ಸಂಸ್ಕೃತಿಕಯನ್ನು ದಾಖಲೀಕರಿಸುವ ಯೋಚನೆಗಳಿವೆ. ಹಿರಿಯರು ಆಚರಿಸಿಕೊಂಡು ಬಂದಿರುವ ಐನ್‌ಮನೆ ಸಂಸ್ಕೃತಿಗಳ ಬಗ್ಗೆ ಕಾರ್ಯಕ್ರಮ ಮಾಡಲಾಗುವುದು.
ಅರೆಭಾಷೆ ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಮೆರವಣಿಗೆ, ಅರೆಭಾಷೆ ನಾಟಕ, ಅರೆಭಾಷೆ ಹಾಡು, ನೃತ್ಯದ ಜತೆಗೆ ಅರೆಭಾಷೆ ಯಕ್ಷಗಾನ ತಂಡ ರಚಿಸುವ ಯೋಚನೆ ಇದೆ. ಅರೆಭಾಷೆ ನಾಟಕ ತರಬೇತಿ, ನೃತ್ಯ ತರಬೇತಿ, ಅರೆಭಾಷೆ ವೇಷಭೂಷಣ, ವಾದ್ಯ ಪರಿಕರ ವಿತರಣೆ, ಅರೆಭಾಷೆಯ ಜಾನಪದ ಸಂಗೀತ ಉತ್ಸವ, ನೃತ್ಯೋತ್ಸವಗಳನ್ನು ಅಯೋಜಿಸುವಂತಹ ಯೋಚನೆಗಳಿವೆ. ಪುಸ್ತಕಗಳ ಮುದ್ರಣ, ಪ್ರಶಶ್ತಿ ಪ್ರಧಾನ ಸಮಾರಂಭ, ಅರೆಭಾಷೆ ಬರಹಗಾರರ, ಕಲಾವಿದರ ಮತ್ತು ಚಿತ್ರಕಲಾ ಜಾನಪದ ಸಮಾವೇಶ, ಅರಭಾಷೆ ಚಿಂತನ ಹಾಗೂ ತಜ್ಞರ ತರಬೇತಿ ಶಿಬಿರದಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.
“ಅರಭಾಷೆ ಸಂಸ್ಕೃತಿ ಗ್ರಾಮ” ನಿರ್ಮಾಣದ ಯೋಚನೆ ಇದ್ದು ಅದಕ್ಕಾಗಿ ಸರಕಾರದಿಂದ ಭೂ ಮಂಜುರಾತಿ ಪಡೆಯಲು ಪ್ರಯತ್ನಿಸಲಾಗುವುದು. ಅರೆಭಾಷೆ ಸಾಹಿತ್ಯ ಸಮ್ಮೇಳನ, ಅರೆಭಾಷೆ ಕವಿಗೋಷ್ಠಿ, ಹಾಗೂ ಪುಸ್ತಕ ಬಿಡುಗಡೆ ಮಾಡುವ ಯೋಚನೆ, ಅರೆಭಾಷೆ ಪಠ್ಯ ಪುಸ್ತಕಗಳಲ್ಲಿ ಅಳವಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.