ವೀಕ್ಷಾಳ ಬದುಕಿಗೆ ಆಸರೆ ನೀಡುವಿರಾ

ಇನ್ನೂ ಬಾಳಿ ಬದುಕಬೇಕಾದ ಎಳೆ ಜೀವ, ಈಕೆಯನ್ನು ಚೆನ್ನಾಗಿ ಓದಿಸಿದ್ರೆ ಮುಂದೆ ನಮ್ಮ ಜೀವನಕ್ಕೆ ಆಸರೆಯಾಗಿರುತ್ತಾಳೆ ಎಂದು ಹೆತ್ತ ತಂದೆ ತಾಯಿ ಬೆಟ್ಟದಷ್ಟು ಕನಸು ಕಂಡಿದ್ರು. ಆದ್ರೆ ವಿಧಿ ಆಕೆಯ ಬಾಳಲ್ಲಿ ಚೆಲ್ಲಾಟವಾಡುತ್ತಿದೆ. ತನ್ನ ಮಗಳ ಕಷ್ಟವನ್ನು ನೋಡಕ್ಕು ಆಗದೇ ಅದನ್ನು ಪರಿಹರಿಸಲು ಆಗದೇ ಹೆತ್ತ ಕರುಳು ಕಣ್ಣಿರಿಡುತ್ತಿದೆ. ಕಲ್ಲು ಮನಸ್ಸನ್ನು ಕರಗಿಸುವ ಆ ಕುಟುಂಬದ ಅಸಹಾಯಕ ದುರಂತ ಸ್ಟೋರಿ ಇಲ್ಲಿದೇ ನೋಡಿ.
ಬೆಟ್ಟದಷ್ಟು ಆಸೆ ಹೊತ್ತ ಈ ಪುಟ್ಟ ಮಗುವಿನ ಕಂಗಳಲ್ಲಿ ಇಂದು ಸಹಾಯದ ಅರ್ತನಾದ. ತನ್ನ ಮಗಳ ಸ್ಥಿತಿ ನೋಡಲು ಆಗದೇ ಕಣ್ಣೀರು ಇಡುತ್ತೀರುವ ತಾಯಿ. ಇದು ಕಲ್ಮಕಾರಿನಲ್ಲಿರುವ ಒಂದು ಕುಟುಂಬದ ಕರುಣಾಜನಕ ಕಥೆ. ಈಕೆಯ ಹೆಸರು ವೀಕ್ಷಾ. ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾ.ಪಂನ ಕಲ್ಮಕಾರು ಗ್ರಾಮದ ಪನ್ನೆ ಜತ್ತಪ್ಪ ಮತ್ತು ಕುಮುದಾಕ್ಷಿ ದಂಪತಿಗಳಿಗೆ ಮೂರು ಜನ ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡವಳು ಕೆ.ವಿ.ಜಿ ಪ್ರೌಢಶಾಲೆ ಕೊಲ್ಲಮೊಗ್ರುವಿನ ಎಂಟನೇ ತರಗತಿಯ ವಿದ್ಯಾರ್ಥಿನಿ. ಮತ್ತೊಬ್ಬಳು ಕಲ್ಮಕಾರು ಪ್ರಾಥಮಿಕ ಶಾಲೆಯ ಎಳನೇ ತರಗತಿಯ ವಿದ್ಯಾರ್ಥಿನಿ. ತಂದೆ ಕೂಲಿ ಕೆಲ ಮಾಡುತ್ತಿದ್ದಾರೆ. ಈ ಪುಟ್ಟ ಹಸುಳೆಗೆ ಇನ್ನೂ ೧ ವರ್ಷ ಪೂರ್ತಿಯಾಗಿಲ್ಲ. ಈಕೆಯ ತಂದೆ ತಾಯಿ ಎಲ್ಲಾ ಮಕ್ಕಳಂತೆ ಈಕೆ ಸ್ಕೂಲ್‌ಗೆ ಹೋಗಿ ಚೆನ್ನಾಗಿ ಓದಿ ಉದ್ಯೋಗಕ್ಕೆ ಸೇರಿ
ನಮಗೆ ಮುಂದೆ ಆಸರೆಯಾಗಿರುತ್ತಾಳೆ ಅಂದುಕೊಂಡಿದ್ರು. ಆದ್ರೆ ಆದೇನು ಕೋಪವೂ ವಿಧಿಗೆ. ಈಕೆಯ ಭವಿಷ್ಯವೇ ಈಕೆಗೇ ಯಮನಾಗಿ ಕಾಣುತ್ತಿದೆ. ನಾಳೇ ಉದಯಿಸುತ್ತಿರುವ ಸೂರ್ಯ ಈಕೆಯ ಬಾಳನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡು ಚೆಲ್ಲಾಟವಾಡುತ್ತಿದೆ. ತೀರಾ ಬಡತನದಲ್ಲಿರುವ ವೀಕ್ಷಾಕ ಕುಟುಂಬ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಸ್ಪತ್ರೆಗೆ ತೆರಳಿದ್ದು ಬೈಪಾಸ್ ಸರ್ಜರಿ ಆಗಬೇಕಿದೆ. ಚಿಕಿತ್ಸೆಗಾಗಿ ೩ ಲಕ್ಷಕಿಂತ ಮೇಲ್ಪಟ್ಟು ಹಣದ ಅಗತ್ಯವಿದೆ. ಭವಿಷ್ಯದಲ್ಲಿ ತನ್ನ ಕುಟುಂಬಕ್ಕೆ ಆಸರೆಯಾಗಬೇಕಾದ ವೀಕ್ಷಾಳ ಬದುಕು ಚಿಂತಾಜನಕ ಸ್ಥಿಯಲ್ಲಿದೆ. ಕಡುಬಡತನದಿಂದ ಇರುವ ಈ ಕುಟುಂಬಕ್ಕೆ ಹಣ ಜೋಡಿಸುವುದು ಕಷ್ಟದ ಸಂಗತಿಯಾಗಿದೆ.ಆದ್ದರಿಂದ ಈಕೆಯ ಚಿಕಿತ್ಸೆಗೆ ಸಹೃದಯ ದಾನಿಗಳ ನೆರವು ಅಗತ್ಯವಾಗಿದೆ. ಈಕೆಗೆ ಸಹಾಯ ಮಾಡುವವರು ಈ ಖಾತೆಗೆ ಹಣ ಜಮೆ ಮಾಡಬಹುದು.:

131101050270137 (ಕುಮುದಾಕ್ಷಿ)
IFSC: VIJB 0001311 
ವಿಜಯ ಬ್ಯಾಂಕ್ ಕೊಲ್ಲಮೊಗ್ರ ಶಾಖೆ.
ಪೋನ್: 9483149384

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.