HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
Breaking News

ಕರಿಂಬಿಲ ಖಿಲ್‌ರಿಯ ಜುಮಾ ಮಸ್ಜಿದ್‌ನಲ್ಲಿ ಬೃಹತ್ ನಹತೇ ಶರೀಫ್ ಹಾಗೂ ಏಕದಿನ ಮತಪ್ರಭಾಷಣಾ ಕಾರ್ಯಕ್ರಮ

ಖಿಲ್‌ರಿಯಾ ಜುಮಾ ಮಸ್ಜಿದ್ ಕರಿಂಬಿಲ ಇದರ ಅಂಗಸಂಸ್ಥೆಯಾದ ಬದ್ರಿಯಾ ಯಂಗ್‌ಮೆನ್ಸ್ ಅಸೋಸಿಯೇಶನ್ ಕರಿಂಬಿಲ ಇದರ ವಾರ್ಷಿಕೋತ್ಸವದ ಅಂಗವಾಗಿ ಜ. ೧೨ರಂದು ಬೃಹತ್ ನತೇ ಶರೀಫ್ ಹಾಗೂ ಏಕದಿನ ಮತಪ್ರಭಾಷಣ ಕಾರ್ಯಕ್ರಮವು ಸಂಜೆ ಕರಿಂಬಿಲ ತರ್ಬಿಯತುಲ್ ಇಸ್ಲಾಂ ಮದರಸ ವಠಾರದಲ್ಲಿ ಕರಿಂಬಿಲ ಮಸ್ಜಿದ್ ಅಧ್ಯಕ್ಷ ಅಬ್ದುಲ್ ರಝಾಕ್ ಮುಸ್ಲಿಯಾರ್ ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಸತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಎಣ್ಮೂರು ಆಲ್-ಬುಖಾರಿ ಬಹು ಅಸ್ಯಯ್ಯದ್ ಝೈನುಲ್ ಅಬಿದೀನ್ ತಂಙಳ್ ದುಆ ನೇತೃತ್ವ ವಹಿಸಿದ್ದರು. ಮಸ್ಜಿದ್ ಖತೀಬರಾದ ಅಬ್ದುಲ್ ಮಜೀದ್ ಝೂನಈಮಿ ಅಮ್ಚಿನಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಕರಿಂಬಿಲ ಮುಅಲ್ಲಿಂ ಮೊಹಿಯುದ್ದೀನ್ ಮುಸ್ಲಿಯಾರ್ ಸ್ವಾಗತ ಭಾಷಣ ಮಾಡಿದರು. ಬಹು ಖಾಲಿದ್ ಉವೈಸಿ ಇಡುಕ್ಕಿ ಕೇರಳರವರು ಅನುಗ್ರಹ ಞ್ಞಳೇ ಅವಗನಿಕ್ಕಪ್ಪೆಡುಂಬೋಳ್ ಎಂಬ ವಿಷಯದ ಬಗ್ಗೆ ಮುಖ್ಯ ಪ್ರಭಾಷಣ ಮಾಡಿದರು.

ವೇದಿಕೆಯಲ್ಲಿ ಮಾಸ್ಟರ್ ನಬೀಲ್ ಬೆಂಗಳೂರು, ಮಾಸ್ಟರ್ ಸಲ್ಮಾನ್ ಪಾರಿಸ್ -ಉಳ್ಳಾಲ, ಮಾಸ್ಟರ್ ಅಸ್ತರ್ ಮಂಗಳೂರುರವರು ನಸತೇ ಶರೀಫ್ ಉಪಸ್ಥಿತರಿದ್ದರು.ಬಿವೈಎ ಅಧ್ಯಕ್ಷ ಶಿಹಾಬುದ್ದೀನ್, ಇಬ್ರಾಹಿಂ ಸಖಾಫಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ವಕ್ಫ್ ಬೋರ್ಡ್ ಸುಳ್ಯ ಕೌನ್ಸಿಲರಾದ ಸಂಶುದ್ದೀನ್, ಬೈತಡ್ಕ ಎಸ್.ಜೆ.ಎಮ್. ಅಧ್ಯಕ್ಷ ಕೊಂಬಾಳಿ ಝುಹ್ರಿ, ಅಲೆಕ್ಕಾಡಿ ಜುಮಾ ಮಸ್ಜಿದ್ ಖತೀಬರಾದ ಸುಲೈಮಾನ್ ಸದಿ, ಯೂಸುಫ್ ಸಖಾಫಿ ಸದರ್ ಮುಅಲ್ಲಿಂ ಮಾಲೆಂಗಿರಿ, ಮುರುಳ್ಯ ಶಾಂತಿನಗರ ರಿಫಾಯಿಯ್ಯ ಮಸ್ದಿದ್ ರಫೀಕ್ ನಿಝಾಮಿ ಇಮಾರಿ, ನೆಕ್ಕಿಲ ಪಂಜ ಜೆ.ಎಂ. ಖತೀಬರಾದ ಅಬ್ದುಲ್ ಹಮೀದ್ ಮದನಿ, ಪುಣ್ಚತ್ತಾರು ಜೆ.ಎಂ. ಖತೀಬರಾದ ಹಸನ್ ಝುಹ್ರಿ, ತಂಬಿನಮಕ್ಕಿ ದಾರುಲ್ ಹುದಾ ಅಬ್ದುಲ್ ಝುಹ್ರಿ ಮೊಗರ್ಪಣೆ, ತಾಲೂಕು ಪಂ. ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಎಣ್ಮೂರು ಜೆ.ಎಂ. ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ, ನಿಂತಿಕಲ್ಲು ಬಿ.ಜೆ.ಎಂ. ಅಧ್ಯಕ್ಷರಾದ ಅಬ್ದುಲ್ ಜಿ., ಪಿಡಬ್ಲ್ಯೂಡಿ ಗುತ್ತಿಗೆದಾರರಾದ ಅಬ್ದುಲ್ ಜಲೀಲ್ ಬೈತಡ್ಕ, ಶಾಂತಿನಗರ ಮಸ್ಜಿದ್ ಅಧ್ಯಕ್ಷ ಮಹಮ್ಮದ್ ನೂಜಾಡಿ, ನಿಂತಿಕಲ್ಲು ಮಸ್ಜಿದ್ ಉಪಾಧ್ಯಕ್ಷ ಇಬ್ರಾಹಿಂ ಕಜೆ, ಮುಚ್ಚಿಲ ಕೆ.ಜಿ.ಎನ್ ಕ್ರೇನ್ಸ್ ಶರೀಫ್, ನಿಂತಿಕಲ್ಲು ಬಿಜೆಎಂ ಕಾರ್ಯದರ್ಶಿ ಸುಲೈಮಾನ್ ಪ್ರಗತಿ, ಸಲಾಲ ಟ್ರಾವೆಲ್ಸ್ ಬೆಳ್ಳಾರೆಯ ಹನೀಫ್, ಕರಿಂಬಿಲ ಮಸ್ಜಿದ್ ಖಜಾಂಜಿ ಸಿ.ಎ.ಅಬ್ದುಲ್ ಖಾದರ್, ಕರಿಂಬಿಲ ಮಸ್ಜಿದ್ ಪ್ರ.ಕಾರ್ಯದರ್ಶಿ ಅಬುಸ್ಟಾಲಿಹ್, ಮಾಜಿ ಅಧ್ಯಕ್ಷ ಹಸೈನಾರ್ ಉಳ್ಳಲಾಡಿ, ಮಾಜಿ ಅಧ್ಯಕ್ಷ ಇಬ್ರಾಹಿಂ ಎಂಜಿರ್, ಅಬ್ದುಲ್ಲ ಉಳ್ಳಲಾಡಿ, ಪಾಜಪಳ್ಳ ಪ್ರಂಟ್‌ಲೈನ್ ಶರೀಫ್, ಪಯಾಝ್ ನಿಂತಿಕಲ್ಲು, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಮೊಗರಾಣೆ ವೇದಿಕೆಯಲ್ಲಿದ್ದರು.

ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸ್ತ್ರೀಯರು ಭಾಗವಹಿಸಿ ಸೀರಣೆ ಸ್ವೀಕರಿಸಿದರು. ಅವರಿಗೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಿ, ಕಾರ್ಯಕ್ರಮ ವೀಕ್ಷಿಸಲು ಟಿವಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಆನ್‌ಲೈನ್‌ನ ಮೂಲಕ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗಿತ್ತು. ಸ್ವಾಗತ ಸಮಿತಿ ಅಧ್ಯಕ್ಷರು, ಸದಸ್ಯರು, ಬಿವೈಎ ಅಧ್ಯಕ್ಷರು ಸದಸ್ಯರು, ಮಸ್ಜಿದ್ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮಕ್ಕೆ ಯಶಸ್ವಿಯಾಗಲು ಸಹಕರಿಸಿದರು.

Advt_NewsUnder
Advt_NewsUnder

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.