ಗೂನಡ್ಕ: ಉರೂಸ್  ಸಮಾರಂಭ

 

ನೆರೆಮನೆಯರೊಂದಿಗೆ ವೈಮಸ್ಸಿನಿಂದ ಕೂಡಿದ ಜೀವನ ನರಕಕ್ಕೆ ದಾರಿ – ಅಬ್ದುಲ್ ಕರೀಮ್ ಪೈಝಿ ಕುಂತೂರುನಮ್ಮ ಮನೆಯ ಸುತ್ತಲು ಇರುವ ೧೬೦ ನೆರೆಮನೆಯರೊಂದಿಗೆ ಉತ್ತಮವಾದ ಭಾಂದವ್ಯವನ್ನು ಹೊಂದಿರಬೇಕು ಅದರೊಂದಿಗೆ ವೈಮನಸ್ಸು ಸಲ್ಲದು. ನೆರೆಮನೆಯೊಬ್ಬ ಉನ್ನತಿಯಾದರೆ ಸಂತೋಷಪಡಬೇಕು ಹೊರತು ಅಸೂಯೆಪಡಬಾರದು .ವೈಮಸ್ಸಿನ್ನಿಂದ ಕೂಡಿದ ಜೀವನ ನರಕಕ್ಕೆ ದಾರಿ ಎಂದು ಖ್ಯಾತ ವಿದ್ವಾಂಸ ಅಬ್ದುಲ್ ಕರೀಮ್ ಪೈಝಿ ಕುಂತೂರು ಅಭಿಪ್ರಾಯಪಟ್ಟರು .ಅವರು ಪೇರಡ್ಕ-ಗೂನಡ್ಕದಲ್ಲಿ ನಡೆದ ಉರೂಸ್ ನ ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದರು. ಅಧ್ಯಕ್ಷತೆಯನ್ನು ಉರೂಸ್ ಸಮಿತಿಯ ಅಧ್ಯಕ್ಷರಾದ ಟಿ.ಎಂ ಶಹೀದ್ ವಹಿಸಿದರು. ಖತೀಬ್ ಇಬ್ರಾಹಿಂ ಖಲೀಲ್ ಪೈಝಿ ಸಮಾರಂಭವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಜಮಾ ಅತ್ ಅಧ್ಯಕ್ಷ  ಎಸ್ ಆಲಿಹಾಜಿ, ಕಾರ್ಯದರ್ಶಿ ಪಿ ಕೆ ಉಮ್ಮರ್, ಮಾಜಿ ಅಧ್ಯಕ್ಷರಾದ ಹಾಜಿ ಟಿ.ಎಂ ಬಾಬಾ, ಸೈದುಹಾಜಿ , ಅಬ್ದುಲ್ ರಹಿಮಾನ್  ಮೊಟ್ಟೆಂಗಾರ್ , ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕರಾವಳಿ , ಪಿ ಎ ಮಹಮ್ಮದ್ ಹಾಜಿ ,ಕಲ್ಲುಗುಂಡಿ ಮಸೀದಿ ಖತೀಬ್ ಅಬ್ದುಲ್ ರಜಾಕ್ ಪೈಝಿ ,ಅರಂತೋಡು ಜಮಾ ಅತ್ ಅಧ್ಯಕ್ಷ  ಹಾಜಿ ಕೆ.ಎಂ ಮಹಮ್ಮದ್ ಎ ಅಹಮ್ಮದ್ ಕುಂಞ ಪಠೇಲ್,ಅಬ್ದುಲ್ ಅಜೀಜ್ ಜೈನಿ, ಎಸ್.ಕೆ. ಹನೀಫ್ ಮೊದಲಾದವರು ಉಪಸ್ಥಿತರಿದ್ದರು.ಸದರ್ ಝಕರಿಯಾ ದಾರಿಮಿ ಸ್ವಾಗತಿಸಿ, ಜಿ.ಕೆ. ಹಮೀದ್ ವಂದಿಸಿದರು. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.