HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
Breaking News

ಈ ಕಾಲದ ಸಾಹಿತ್ಯ ಹೋಗುತ್ತಿರುವ ದಾರಿಯ ಪರಾಮರ್ಶೆ ಅಗತ್ಯ : ಡಾ. ಪೂರ್ಣಿಮಾ

ಕನ್ನಡ ಭಾಷೆಯ ಅಳಿವು ಉಳಿವಿನ ಚರ್ಚೆ ನಡೆಯುವ ಜೊತೆಗೆ ಕನ್ನಡ ಸಾಹಿತ್ಯ ಹೋಗುತ್ತಿರುವ ದಾರಿಯ ಬಗ್ಗೆಯೂ ಚರ್ಚೆ ನಡೆಯಬೇಕು. ವಿಶೇಷವಾಗಿ ಈ ಕಾಲದ ಸಾಹಿತ್ಯ ಹೊರಳುವ ದಾರಿಯ ಬಗ್ಗೆ ಪರಾಮರ್ಶೆ ನಡೆಯಬೇಕು ಎಂದು ಮೈಸೂರು ಕ್ಷೇತ್ರ ನಿರ್ದೇಶನಾಲಯದ ಮುಖ್ಯಸ್ಥೆ, ಲೇಖಕಿ ಡಾ. ಟಿ.ಸಿ ಪೂರ್ಣಿಮಾ ಹೇಳಿದ್ದಾರೆ. ದುಗಲಡ್ಕದಲ್ಲಿ ನಡೆದ ೨೨ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನಂತೆ ಇಂದು ಗಟ್ಟಿ ಸಾಹಿತ್ಯ ಬರುತ್ತಿಲ್ಲ. ಗೀಚಿದೆಲ್ಲವೂ ಸಾಹಿತ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳು ಕಿರಿಯರಿಗೆ ದಿಕ್ಕು ದೆಸೆ ತೋರಬೇಕು. ಸಾಹಿತ್ಯವನ್ನು ಕೆಳ ಮಟ್ಟದಲ್ಲಿ ಬೆಳೆಸಲು ಸಾಹಿತ್ಯ ಸಮ್ಮೇಳನಗಳು ಕಾರಣವಾಗುತ್ತದೆ ಎಂದು ಹೇಳಿದರು.

ಕನ್ನಡದ ಭಾವನೆಗಳೆಂದರೆ ನಾಭಿಗೆ ಅಂಟಿಕೊಂಡಿರುವಂತದ್ದು. ಭಾಷೆಯ ಕೂಗಿಗೆ ಎದ್ದು ನಿಲ್ಲುವ ಕಾಲ ಬಂದಿದೆ. ನಾಭಿಯ ಭಾವನೆಗಳನ್ನು ಪ್ರಚುರ ಮತ್ತು ಪ್ರಚೋಧನೆಗಳಿಗೆ ಒಳಪಡಿಸುವ ಕಾರ್ಯವಾಗಬೇಕು ಎಂದ ಅವರು ದಕ್ಷಿಣ ಕನ್ನಡ ಮತ್ತು ಸುಳ್ಯ ಭಾಗ ಭಾರತದ ಭೂಪಟಕ್ಕೆ ದೊಡ್ಡ ಕೊಡುಗೆ ನೀಡಿದೆ. ಈ ಭಾಗದ ಉಪ ಭಾಷೆಗಳು ಕನ್ನಡದೊಂದಿಗೆ ಕೊಂಡಿಯಾಗಿದೆ ಎಂದು ಅವರು ಹೇಳಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.