Breaking News

ಅವಸಾನದ ಅಂಚಿನಲ್ಲಿರುವ ಸಣ್ಣ ಭಾಷೆಗಳ ಉಳಿವೆಕೆಯ ಕುರಿತು ಸಂವಾದ ನಡೆಯುತ್ತಿಲ್ಲ: ವಸಂತ ಶೆಟ್ಟಿ ಬೆಳ್ಳಾರೆ

ಸುಳ್ಯ ತಾಲೂಕು ೨೨ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಸಂತ ಶೆಟ್ಟಿ ಬೆಳ್ಳಾರೆ ವಹಿಸಿದ್ದರು. ಈ ವೇಳೆ ಮಾತಾನಾಡಿದ ಅವರು ಸ್ಲೇಟು, ಕಡ್ಡಿ ಈಗ ಕಾಣೆಯಾಗಿದೆ.ಪೆನ್ಸಿಲ್‌ಗಳು ಕೂಡ ಇನ್ನೂಂದಷ್ಟೂ ದಿನಗಳಲ್ಲಿ ಮ್ಯೂಸಿಯಂ ಸೇರಿಕೊಂಡರೆ ಆಶ್ವರ್ಯವೇನೂ ಇಲ್ಲ. ಹಿಂದೆ ಅಕ್ಷರಾಭ್ಯಾಸವನ್ನು ಅಕ್ಕಿಯಲ್ಲಿ ಬೆರಳಿನಿಂದ ಮಾಡಿಸುತ್ತಿದ್ದರು. ಬೆರಳಿನಂತೆ ಆರಂಭಗೊಂಡ ಅಕ್ಷರಜ್ಞಾನದಿಂದ ಇಡೀ ಜಗತ್ತನ್ನು ಓದಲು, ನೋಡಲು ಮತ್ತು ಅನುಭವಿಸಲು ಸಾಧ್ಯವಾಯಿತು. ಆದರೆ ಈಗ ಇಡೀ ಜಗತ್ತು ನಮ್ಮ ಬೆರಳ ತುದಿಯಲ್ಲಿದೆ. ಡಿಜಿಟಲ್ ಯುಗ ಆರಂಭವಾಗಿ ಒಂದು ಕಾಲದಲ್ಲಿ ಅತ್ಯಂತ ಕಷ್ಟಕರವಾಗಿದ್ದ ಬ್ಯಾಂಕಿಗ್ ಸೇವೆ, ಡ್ರೈವಿಂಗ್ ಲೈಸನ್ಸ್, ಆರ್.ಟಿ.ಸಿ ಪಾಸ್‌ಪೋರ್ಟ್ ಇತ್ಯಾದಿಗಳು ಸಲೀಸಾಗಿವೆ. ಇಂದು ನಾವೆಲ್ಲ ಅಧಾರ್ ಕಾರ್ಡ್‌ನ ಒಂದು ಪುಟ್ಟ ಚಿಪ್ಪಿನೊಳಕ್ಕೆ ಹುದುಗಿಕೊಂಡಿದ್ದೇವೆ. ಇನ್ನೂ ನೂರೂರು ಮಹತ್ತರವಾದ ಸೇವೆಗಳು ಅಡುಗೆ ಮನೆಯಿಂದಲೇ ಸಾಧ್ಯವಾಗುವಂತಾಗಿವೆ. ಈಗಾಗಲೇ ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹತ್ತರವಾದ ಕೆಲಸಗಳನ್ನು ಕೈಗೊಂಡಿದೆ.ಇಂಗ್ಲಿಷ್‌ನ ಪ್ರಾಬಲ್ಯವು ಜಗತ್ತಿನಾದ್ಯಂತ ಸಜೀವವಾಗಿರುವ ಸಾವಿರಾರು ಸಣ್ಣ ಭಾಷೆಗಳನ್ನು ಸಾಯಿಸುತ್ತೀರುವುದರ ಬಗ್ಗೆ ಆಯಾ ದೇಶಗಳ ಸರಕಾರಗಳು ಏನೂ ಕ್ರಮ ಕೈಗೊಳ್ಳದಿರುವುದೇ ಅವುಗಳ ಭೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಅಧಿಕಾರಿಗಳು ಮತ್ತು ಸರಕಾರಗಳು ಸಣ್ಣ ಭಾಷೆಗಳ ಕುರಿತು ತೋರುತ್ತಿರುವ ನಿರ್ಲಕ್ಷವು ಅವುಗಳನ್ನು ಜಗತ್ತಿನಾದ್ಯಂತ ಅವಸಾನದ ಅಂಚಿಗೆ ತಂದು ನಿಲ್ಲಿಸಿವೆ ಮಾತ್ರವಲ್ಲ ಇಂಗ್ಲಿಷಿನ ಅಧಿಪತ್ಯವನ್ನು ಸುಲಭವಾಗಿ ಒಪ್ಪಿಕೊಳ್ಳುವಂತೆ ಮಾಡಿವೆ. ಇಂದು ಎಲ್ಲೆಡೆಯೂ ಸಣ್ಣ ಭಾಷೆಗಳ ಧ್ವನಿ ಉಡುಗಿವೆ. ಅವುಗಳ ನಾಲಗೆ ಕೆಟ್ಟುಗೋಗಿವೆ. ಉಳುವಿಗಾಗಿ ಅವು ಹೆಣಗಾಡುತ್ತಿದೆ. ಕಲಿಕೆ ಮತ್ತು ಉಪಯೋಗಗಳ ವಿಷಯದಲ್ಲಿ ಇಂಗ್ಲಿಷ್ ಜಗತ್ತಿನ್ಯಾಂದ ಸಾವಿರಾರು ಸಣ್ಣ ಬಾಷೆಗಳನ್ನು ಅಪಾಯದ ಅಂಚಿಗೆ ತಳ್ಳಿದೆ. ಮಾತೃಭಾಷೆಯಲ್ಲಿ ಎಲ್ಲವನ್ನು ಸಾಧಿಸಿದ ದೇಶಗಳು ಕೂಡಾ ಇಂದು ಇಂಗ್ಲಿಷ್‌ಗಾಗಿ ಹಪಹಪಿಸುತ್ತ ತಮ್ಮ ದೇಶದ ತಮ್ಮದೇ ದೇಶದ ಭಾಷೆಗಳ ಸಾವಿಗೆ ಕಾರಣವಾಗುತ್ತಿವೆ. ಭಾರತದಲ್ಲಿ ಈ ಸಮಸ್ಯೆ ಇನ್ನೂ ತೀವ್ರತರವಾಗಿದ್ದರೂ, ಕೂಮುವಾದ, ಧರ್ಮ, ಭ್ರಷ್ಟಾಚಾರ, ಜಾತ, ರಾಜಕೀಯ ಮತ್ತಿತರ ವಿಷಯಗಳ ಕುರಿತು ಇಲ್ಲಿ ಚರ್ಚೆ ನಡೆದ ಹಾಗೇ, ಅವಸಾನದ ಅಂಚಿನಲ್ಲಿರುವ ಸಣ್ಣ ಭಾಷೆಗಳ ಉಳಿವೆಕೆಯ ಕುರಿತು ಸಂವಾದ ನಡೆಯುತ್ತಿಲ್ಲ. ಇಂದು ಈ ದೇಶದಲ್ಲಿ ಬಹಳ ಪ್ರಭಾವ ಸಾಲಿಯಾಗಿರುವ ಮಾಧ್ಯಮಗಳಿಗೂ ಈ ಕುರಿತು ಆಸಕ್ತಿ ಇಲ್ಲ, ಭಾಷೆಯ ಅವನತಿಯ ಅಪಾಯಗಳ ಕುರಿತು ತಿಳಿವಳಿಕೆ ಇಲ್ಲದಿರುವದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳದರು.

About The Author

Related posts

Leave a Reply

Your email address will not be published. Required fields are marked *