HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
Breaking News

ಜ.೨೦ ಸುಬ್ರಹ್ಮಣ್ಯದಲ್ಲಿ ದೇವರಾಜ್ ಸ್ಮಾರಕ ವಾಲಿಬಾಲ್


ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ದಿ| ಎಂ ಎಸ್ ದೇವರಾಜ್ ಸ್ಮಾರಕ ವಾಲಿಬಾಲ್ ಪಂದ್ಯಾಟ ದತ್ತಿನಿಧಿ ಜಂಟಿ ಆಶ್ರಯದಲ್ಲಿ ಜ. ೨೦ ರಂದು ಸುಬ್ರಹಣ್ಯದ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ೨೮ ನೇ ವರ್ಷದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ಜರಗಲಿರುವುದು. ಪಂದ್ಯಾಟದ ಉದ್ಘಾಟನೆಯನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ ನೆರವೇರಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಾಳಾಗಿ ರಾಜೀವಿ ಆರ್ ರೈ, ಚಂದ್ರಶೇಖರ ನಾಯರ್, ಹರೀಶ್ ಕಾಮತ್, ಗಣೇಶ್ ಪ್ರಸಾದ್, ಪ್ರಕಾಶ್ ಶೆಟ್ಟಿ, ಗಣೇಶ್ ಕುಂದಾಪುರ ಉಪಸ್ಥಿತರಿರುವರು. ಸಂಜೆ ಲೀಲಾವತಿ ದೇವರಾಜ್ ವೆಂಕಟಾಪುರ ಬಹುಮಾನ ವಿತರಿಸಲಿದ್ದು ಬಹುಮಾನವಾಗಿ ರೂ ೫೦೦೦, ೪೦೦೦,೩೦೦೦, ೨೦೦೦ ಹಾಗೂ ಶಾಶ್ವತ ಫಲಕ ಇರಲಿದೆ ಎಂದು ದತ್ತಿ ನಿಧಿ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.