ಕನಕಮಜಲಿನ ಯುವಕ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ

Advt_Headding_Middle
Advt_Headding_Middle
Advt_Headding_Middle

ಕನಕಮಜಲಿನ ಯುವಕನೋರ್ವ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.೧೯ರಂದು ಸಂಭವಿಸಿದೆ,
ಕನಕಮಜಲು ಗ್ರಾಮದ ನೆಡಿಲು ಕೊಠಾರಿ ದಿ.ಐತಪ್ಪ ಗೌಡ ಹಾಗೂ ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರ ನವೀನ್ ಕುಮಾರ್(೨೮ವರ್ಷ) ಆತ್ಮಹತ್ಯೆ ಮಾಡಿಕೊಂಡ ಯುವಕ. ನವೀನ್ ಕುಮಾರ್‌ರವರು ಕಳೆದ ೨ವರುಷಗಳ ಹಿಂದೆ ಬೆಂಗಳೂರಿನಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಅಣ್ಣನ ವಿವಾಹ ಸಮಾರಂಭಕ್ಕೆ ಮನೆಗೆ ಬಂದಿದ್ದ ನವೀನ್‌ರವರು ೨ ದಿನಗಳ ಕಾಲ ರಜೆ ಮಾಡಿ ಮನೆಯಲ್ಲಿದ್ದರು. ಬಳಿಕ ಪುನಃ ಬೆಂಗಳೂರಿಗೆ ತೆರಳಿದ ಅವರು ಜ.೧೮ರಾತ್ರಿ ಮನೆಗೆ ಪೋನ್ ಮಾಡಿ, ಅಮ್ಮನೊಂದಿಗೆ ಮಾತನಾಡಿ ತಮಗೆ ತೆಂಗಿನಕಾಯಿಗಳನ್ನು ತೆಗೆದು ಇಡಿ ನಾಳೆ ಬರುತ್ತೇನೆ ಎಂದು ಹೇಳಿದ್ದರು. ಅದರೆ ಅದೇ ದಿನ ರಾತ್ರಿ ಅವರು ತಮ್ಮ ರೂಮ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ರೂಮ್‌ನಲ್ಲಿ ೩ಜನ ಸ್ನೇಹಿತರೊಂದಿಗೆ ಇರುದಿದ್ದ ನವೀನ್‌ರವರ ಸ್ನೇಹಿತರಿಬ್ಬರು ಜ.೧೮ರಂದು ರಾತ್ರಿ ತಮ್ಮ ತಮ್ಮ ಕೆಲಸಕ್ಕೆ ತೆರಳಿದ್ದರು. ಬೆಳಿಗ್ಗೆ ೫ಗಂಟೆ ಸುಮಾರಿಗೆ ವಾಹನ ಚಾಲಕರು ಬರಲಿಲ್ಲವೆಂದು ಅಕ್ಕಪಕ್ಕದವರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿಳಿಯಿತು. ಕೊಡಲೇ ಅವರು ಅವರ ಅಣ್ಣ ಬೆಂಗಳೂರಿನಲ್ಲಿರುವ ಚಂದ್ರಶೇಖರ ನೆಡಿಲು ಅವರಿಗೆ ಪೋನ್ ಮಾಡಿ ವಿಷಯ ತಿಳಿಸಿದರು. ಬಳಿಕ ಅವರು ಬಂದು ಬೆಂಗಳೂರುರಿನಲ್ಲಿಯೇ ಪೋಸ್ಟ್ ಮಾಟಮ್ ಮಾಡಿ ಮನೆಗೆ ಕರೆತಂದು ಆ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.
ನವೀನ್ ಕುಮಾರ್ ಉತ್ತಮ ಕ್ರೀಯಾಶೀಲ ಯುವಕನಾಗಿದ್ದು ತಮ್ಮ ಡೈರಿಯಲ್ಲಿ ತಮಗೆ ಬರುವ ಪಿ.ಎಫ್ ನ ಹಣವನ್ನು ತಮ್ಮ ತಾಯಿಗೆ ನೀಡಬೇಕು ಎಂದು ಬರೆದಿದ್ದರು. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತರು ಸಹೋದರರಾದ ಚಂದ್ರಶೇಖರ, ಯೋಗಿಶ, ಸತೀಶ, ಸಹೋದರಿಯರಾದ ಜಯಂತಿ ಹಾಗೂ ಲತಾಕುಮಾರಿಯವರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.