HomePage_Banner
HomePage_Banner
HomePage_Banner

ಶಾಸಕ ಸುನಿಲ್‌ಕುಮಾರ್ ಹೇಳಿಕೆಗೆ ಭರತ್ ಮುಂಡೋಡಿ ಖಂಡನೆ; ರಾಜೀನಾಮೆಗೆ ಆಗ್ರಹ

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಕಾಂಗ್ರೆಸ್ ನಾಯಕರಾದ ಕೆ.ಗೋಕುಲ್‌ದಾಸ್, ದಿನೇಶ್ ಅಂಬೆಕಲ್ಲು, ಸತ್ಯಕುಮಾರ್ ಆಡಿಂಜ, ತೇಜಕುಮಾರ್ ಬಡ್ಡಡ್ಕ, ನಂದರಾಜ್ ಸಂಕೇಶ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.ಕಾರ್ಕಳ ಶಾಸಕ ವಿ.ಸುನಿಲ್‌ಕುಮಾರ್ ಕಲ್ಲಡ್ಕದಲ್ಲಿ ನೀಡಿದ ಹೇಳಿಕೆಯನ್ನು ಕೆಪಿಸಿಸಿ ಕಾರ್ಯದರ್ಶಿ ಮತ್ತು ಕಾರ್ಕಳ ಕ್ಷೇತ್ರದ ಉಸ್ತುವಾರಿ ಭರತ್ ಮುಂಡೋಡಿಯವರು ಖಂಡಿಸಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ಮುಂಬರುವ ಚುನಾವಣೆ ಅಲ್ಲಾಹು ಮತ್ತು ರಾಮನ ನಡುವೆ ನಡೆಯಲಿದೆ ಎಂದು ಸುನಿಲ್‌ಕುಮಾರ್ ಹೇಳಿದ್ದಾರೆ. ಅವರು ಒಂದು ಸಂವಿಧಾನ ಬದ್ಧ ಸ್ಥಾನದಲ್ಲಿರುವವರು. ಸಂವಿಧಾನದ ಪ್ರಮಾಣವಚನ ಪಡೆದುಕೊಂಡವರು. ಆದರೆ ಅವರ ಹೇಳಿಕೆ ಸಂವಿಧಾನ ವಿರೋಧಿಯಾದುದು ಮಾತ್ರವಲ್ಲ. ಪ್ರಮಾಣ ವಚನಕ್ಕೂ ವಿರುದ್ಧವಾದುದು. ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರನ್ನು ಸ್ಥಾನದಿಂದ ವಜಾಗೊಳಿಸಬೇಕು. ಅವರ ಶಾಸಕ ಸ್ಥಾನ ರದ್ದುಪಡಿಸಿ ೬ ವರ್ಷ ಎಲ್ಲಿಯೂ ಚುನಾವಣೆಗೆ ಸ್ಪರ್ಧಿಸದಂತೆ ಚುನಾವಣಾ ಆಯೋಗ ತಡೆಯೊಡ್ಡಬೇಕು ಎಂದು ಹೇಳಿದರು.
ಚುನಾವಣೆಗೋಸ್ಕರ ಬಿಜೆಪಿಯವರು ಕೋಟಿಚೆನ್ನಯರ ಹೆಸರು ಮತ್ತು ಭಾವಚಿತ್ರವನ್ನು ಬಳಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇತಿಹಾಸ ಪುರುಷರ ಹೆಸರು ಬಳಸಲೇಬೇಕೆಂದಿದ್ದರೆ ದುರ್ಯೋಧನ ಮತ್ತು ದುಶ್ಯಾಸನರ ಹೆಸರನ್ನು ಬಳಸಿಕೊಳ್ಳಲಿ. ಇದೇ ಅವರಿಗೆ ಸೂಕ್ತವಾದುದು ಎಂದು ಭರತ್ ಮುಂಡೋಡಿ ವ್ಯಂಗ್ಯವಾಡಿದರು.
ಈ ಕ್ಷೇತ್ರದಲ್ಲಿ ಎಸ್.ಅಂಗಾರರು ನಿರಂತರವಾಗಿ ಗೆದ್ದು ಬರುತ್ತಿದ್ದರೂ ಕ್ಷೇತ್ರದಲ್ಲಿ ಸಂಚರಿಸಿದರೆ ಅವರ ಕಾರ್ಯವೈಖರಿ ನೋಡಬಹುದು. ಏನು ಕೆಲಸ ಮಾಡದಿದ್ದರೂ ಅವರು ಗೆದ್ದು ಬರುವುದರಿಂದ ಅವರಿಗೂ ಕೆಲಸ ಮಾಡಬೇಕೆಂದು ಅನಿಸುತ್ತಿಲ್ಲ. ಆದರೆ ಇನ್ನು ಅಂಗಾರರ ಸಹವಾಸ ಸಾಕು ಎಂದು ಜನ ಬಯಸಿದ್ದಾರೆ ಎಂದ ಭರತ್ ಮುಂಡೋಡಿಯವರು, ಕಂದ್ರಪ್ಪಾಡಿ ರಸ್ತೆಯ ಅಭಿವೃದ್ಧಿಗಾಗಿ ನಾವು ಹೋರಾಟ ಮಾಡಿದಾಗ ಅದರ ವಿರುದ್ಧ ಅಂಗಾರರು ಅತ್ಯಂತ ಬೇಜವಾಬ್ಧಾರಿ ಹೇಳಿಕೆ ನೀಡಿದರು. ಈ ರಸ್ತೆ ಸೇರಿದಂತೆ ತಾಲೂಕಿನ ಎಲ್ಲಾ ರಸ್ತೆಗಳ ಜವಾಬ್ಧಾರಿ ತನ್ನದು ಎಂದು ಹೇಳಿದರು. ಅದಕ್ಕಾಗಿ ನಾನು ಅವರನ್ನು ಅಭಿನಂದಿಸಿ ಜಾಹೀರಾತು ಕೊಟ್ಟೆ. ಅದು ನನ್ನಲ್ಲಿದೆ. ಆದರೆ ರಸ್ತೆ ಮಾತ್ರ ಹಾಗೇ ಇದೆ. ಮುಂಬರುವ ಚುನಾವಣೆಯಲ್ಲಿ ಮನೆಮನೆಗೆ ತೆರಳಿ ಈ ಜಾಹೀರಾತು ತೋರಿಸಿ ಅಂಗಾರರ ಜವಾಬ್ಧಾರಿ ಎಷ್ಟು ಎಂದು ಮನವರಿಕೆ ಮಾಡುತ್ತೇವೆ ಎಂದವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.