Breaking News

ಕರ್ನಾಟಕ ಬಂದ್ ಹಿನ್ನಲೆ : ಸುಳ್ಯದಲ್ಲಿ ಸರಕಾರಿ ಬಸ್ ಓಡಾಟ ಸ್ವಲ್ಪ ಹೊತ್ತು ಸ್ಥಗಿತ

ಮಹದಾಯಿ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಸುಳ್ಯದಲ್ಲಿ ಯಾವುದೇ ಪರಿಣಾಮ ಬೀರಿಲ್ಲವಾದರೂ ಸ್ವಲ್ಪ ಹೊತ್ತು ಸರಕಾರಿ ಬಸ್ ಓಡಾಟ ಸ್ಥಗಿತಗೊಂಡ ಕಾರಣ ಪ್ರಯಾಣಿಕರು

ಪರದಾಟ ಅನುಭವಿಸುವಂತಾಯಿತು. ಬೆಳಿಗ್ಗೆ ೧೦ಗಂಟೆಯವರೆಗೆ ಸರಕಾರಿ ಬಸ್‌ಗಳು ಓಡಾಟ ನಡೆಸಲಿಲ್ಲ ಹೀಗಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು. ನಗರ ಬಿ.ಜೆ.ಪಿ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಬಿ.ಜೆ.ಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಸೋಮನಾಥ ಪೂಜಾರಿಯವರು ಈ ಕುರಿತು ಸಾರಿಗೆ ನಿಯಂತ್ರಕರನ್ನು ಭೇಟಿಯಾಗಿ ಆಕ್ಷೇಪ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ಬಸ್ ಓಡಾಟ ಅರಂಭಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.