Breaking News

ಅರಂತೋಡು: 6ನೇ ದಿನದ ಮದ್ಯವರ್ಜನ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ಹಾಗೂ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪರಮಪೂಜ್ಯ ಡಾ.ಡಿ. ವೀರೆಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ೧೧೮೫ನೇ ಮದ್ಯವರ್ಜನ ಶಿಬಿರವು ಅರಂತೋಡಿನ ತೆಕ್ಕಿಲ್ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯುತ್ತಿದೆ.ಇದರ ೬ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ವಹಿಸಿದ್ದರು. ಮಾಹಿತಿ ಕಾರ‍್ಯಗಾರವನ್ನು ಜಗದೀಶ್ ನೆಲ್ಲಿಕಟ್ಟೆ ವಹಿಸಿದರು. ಮುಖ್ಯ ಅತಿಥಿಯಾಗಿ ಎ.ಜಿ.ವೆಂಕಟ್ರಮಣ, ಸಂಪಾಜೆ ಠಾಣೆಯ ಎಎಸ್‌ಐ ರಾಧಕೃಷ್ಣ ನಾಯಕ್, ಎನ್.ಎಂ.ಪಿ.ಯುನ ಪ್ರಾಂಶುಪಾಲ ರಮೇಶ್, ಪುರುಷೋತ್ತಮ ಉಳುವಾರು, ಸೋಮಶೇಖರ ಪೈಕ, ಪಿ.ಡಿ.ಓ. ಜಯಪ್ರಕಾಶ್, ಚಂದ್ರಶೇಖರ ತೊಡಿಕಾನ, ಜಯಪ್ರಕಾಶ್ ತೊಡಿಕಾನ, ಸೀತಾರಾಮ ಕುದ್ಪಾಜೆ, ವೇಣು ಗೋಪಾಲ ಗಟ್ಟಿಗಾರು ಉಪಸ್ಥಿರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.