Breaking News

ಬೆಳ್ಳಾರೆ: ತಾಲೂಕು ಬಂಟರ ಸಮಾವೇಶ-ಎಲ್ಲಾ ಜಾತಿಯವರನ್ನು ಒಗ್ಗೂಡಿಸುವ ಶಕ್ತಿ ಬಂಟರಿಗಿದೆ – ಶಕುಂತಳಾ ಶೆಟ್ಟಿ

Advt_Headding_Middle

“ಸಮಾಜದಲ್ಲಿ ಬಂಟರು ನಾಯಕತ್ವ ಗುಣ ರೂಢಿಸಿಕೊಂಡವರು. ಪ್ರತಿಯೊಂದು ಕೆಲಸದಲ್ಲೂ ಬಂಟರು ಇದ್ದಾರೆ. ನಾವು ಇತರರನ್ನು ಅವಲಂಬಿಸಿಕೊಂಡು ಇರಬಾರದು. ಸ್ವಂತ ದುಡಿದು ಸಂಪಾದನೆ ಮಾಡಬೇಕು. ಎದ್ದು ನಿಲ್ಲಬೇಕು. ಎಲ್ಲಾ ಜಾತಿ ಧರ್ಮದವರನ್ನು ಪ್ರೀತಿಸಬೇಕು. ಸಮಾಜದಲ್ಲಿ ಎಲ್ಲಾ ಜಾತಿ, ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಬಂಟರಿಗಿದೆ. ಇದರಿಂದ ಬಂಟ ಸಮುದಾಯ ಮುಂದುವರಿಯಲು ಸಾಧ್ಯವಾಗಿದೆ” ಎಂದು ಪುತ್ತೂರಿನ ಶಾಸಕರು ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶ್ರೀಮತಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಬಂಟರ ಯಾನೆ ನಾಡವರ ಸಂಘ ಸುಳ್ಯ, ವಲಯ ಬಂಟರ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ಬೆಳ್ಳಾರೆ ಸ.ಪ.ಪೂ. ಕಾಲೇಜಿನ ನಾರಾಯಣ ಶೇಖ ಸಭಾಭವನದಲ್ಲಿ ನಡೆದ ಬಂಟರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಬಂಟರು ಸಂಸ್ಕಾರದ ಅಡಿಯಲ್ಲಿ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ನಮ್ಮ ಮಕ್ಕಳು ಸಮಾಜಕ್ಕೆ ಆದರ್ಶರಾಗಬೇಕು, ಜನ ಮೆಚ್ಚಬೇಕು, ಸಮಾಜಕ್ಕೆ ಕಳಂಕ ತರಬಾರದು, ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಒಳ್ಳೆಯ ಸಾಧಕರಾಗಿ ಬಾಳಬೇಕು ಎಂದು ಅವರು ಹೇಳಿದರು.
ಸಮಾವೇಶವನ್ನು ಪುತ್ತೂರಿನ ವಿಕ್ಟರ‍್ಸ್ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಜಯಮಣಿ ಎಸ್.ರೈ ಪೆರುವಾಜೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ದಯಾಕರ ಆಳ್ವ ಪೆರುವಾಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾ ಕಡೆಗಳಲ್ಲಿ ಬಂಟರ ಸಂಘ ಇದೆ.ಎಲ್ಲರಿಗೂ ಬಂಟರ ಸಂಸ್ಕೃತಿ ತಿಳಿದಿದ್ದು ಒಳ್ಳೆಯ ಸಾಧನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.ನಂತರ ಯುವ ಸಮಾಜ ಸೇವೆಗಾಗಿ ಪ್ರದೀಪ್ ಕುಮಾರ್ ಪನ್ನೆ, ಸಾಂಸ್ಕೃತಿಕ ಸೇವೆಗಾಗಿ ಪ್ರಮೋದ್ ಕುಮಾರ್ ರೈ ಪೆರುವಾಜೆ, ರ‍್ಯಾಂಕ್ ವಿಜೇತರಾದ ವಿನೀತ್ ಕುಮಾರ್ ಶೆಟ್ಟಿ ಪೆರುವಾಜೆ, ಎಂ.ಟೆಕ್ ನಲ್ಲಿ ಚಿನ್ನದ ಪದಕ ಪಡೆದ ಶ್ರೀಮತಿ ಸಷಾ ರೈ, ರಾಷ್ಠ್ರೀಯ ಕ್ರೀಡಾಪಟು ಕುಮಾರಿ ವಿದ್ಯಾಲಕ್ಷ್ಮೀ ಎನ್.ವಿ.ರೈ ಯವರಿಗೆ ಯುವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಬಂಟರ ಸಂಘದ ಗೌರವಾಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಂಟರ ಮಾತೃ ಸಂಘದ ನಿರ್ದೇಶಕರಾದ ದಿವಾಕರ ರೈ ಪೆರುವಾಜೆ,ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಭದಾ ರೈ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ರಾಜೀವಿ ಆರ್.ರೈ , ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಚಲನಚಿತ್ರ ನಟಿ ಕು.ಐಶಾನಿ ಶೆಟ್ಟಿ, ವಲಯ ಬಂಟರ ಸಂಘದ ಗೌರವಾಧ್ಯಕ್ಷ ಚಿತ್ರಪ್ಪಾಡಿ ರಾಜಾರಾಮ ರೈ, ಸುಳ್ಯ ಬಂಟರ ಯಾನೆ ನಾಡವರ ಸಂಘದ ಗೌರವಾಧ್ಯಕ್ಷೆ ಶ್ರೀಮತಿ ಕಮಲಾಕ್ಷಿ ವಿ.ಶೆಟ್ಟಿ, ವಲಯದ ಖಜಾಂಚಿ ಪುಡ್ಕಜೆ ಚಂದ್ರಹಾಸ ರೈ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ ಹಾಗೂ ಇತರರು ಉಪಸ್ಥಿತರಿದ್ದರು.
ಜ್ಞಾನಗಂಗಾ ಶಾಲೆ ಮತ್ತು ವಿದ್ಯಾರಶ್ಮಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಪ್ರದೀಪ್ ಕುಮಾರ್ ರೈ ಪನ್ನೆ ಮತ್ತು ಅಮಿತಾ ಯೋಗಿಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.