ಯೇನೆಕಲ್ಲು: ಸಂತೃಪ್ತಿ ಸೌಧ ಲೋಕಾರ್ಪಣೆ:ಕೃಷಿ ಇಲ್ಲದಿದ್ದರೆ ಬದುಕಿಲ್ಲ ಸುಬ್ರಹ್ಮಣ್ಯ ಶ್ರೀ

Advt_Headding_Middle
Advt_Headding_Middle
Advt_Headding_Middle

ಗ್ರಾಮೀಣ ಬದುಕಿಗೆ ಮತ್ತು ರಾಷ್ಟ್ರದ ಬೆಳವಣಿಗೆಯಲ್ಲಿ ಕೃಷಿಯೇ ಪ್ರಧಾನ ಅಂಶವಾಗಿದೆ. ಕೃಷಿ ಇಲ್ಲದೆ ಮನುಷ್ಯನಿಗೆ ಬದುಕಿಲ್ಲ. ಕೃಷಿಕರ ಶ್ರೇಯೋಭಿವೃದ್ಧಿಗಾಗಿ ಹುಟ್ಟಿಕೊಂಡ ಸಂಸ್ಥೆ ಸಹಕಾರಿ ಸಂಘ. ಪೃಥು ಎಂಬ ರಾಜನಿಂದ ಈ ಭೂಮಿಯ ಮೇಲೆ ಕೃಷಿ ಪ್ರಾರಂಭವಾದುದರಿಂದ ಈ ಭೂಮಿಗೆ ಪೃಥ್ವಿ ಎಂಬ ಹೆಸರು ಬಂತು ಎಂದವರು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಕೃಷಿಕರಿಗೆ ಅವರಿಗೆ ಬೇಕಾದಷ್ಟು ಸಾಲ ೦% ಮತ್ತು ೩% ನಲ್ಲಿ ಕೊಡಿ. ದ.ಕ. ಜಿಲ್ಲೆಯಲ್ಲಿಯೇ ಸುಳ್ಯ ತಾಲೂಕಿನ ರೈತರು ಹೆಚ್ಚು ನಿಷ್ಠಾವಂತರು. ಸಾಲವನ್ನು ಶೇ. ೧೦೦ ಮರುಪಾವತಿಸುತ್ತಾರೆ. ರೈತರು ಬೆಳೆದ ಬೆಳೆಗೆ ಸರಿಯಾದ ಮೌಲ್ಯ ದೊರೆತರೆ ಮರುಪಾವತಿಯಲ್ಲಿ ಹಿನ್ನೆಡೆಯಾಗುವುದಿಲ್ಲ. ಉನ್ನತ ಶಿಕ್ಷಣ ಪಡೆದವರೂ ಮುಂದೊಂದು ದಿನ ಕೃಷಿಯ ಮೊರೆ ಹೋಗುವ ದಿನ ಬಂದೇ ಬರುತ್ತದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಕೆ.ಎಸ್. ದೇವರಾಜ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಭ್ಯಾಗತರಾಗಿ ಭಾಗವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಹಳ್ಳಿ ಹಳ್ಳಿಗಳಲ್ಲಿ ಆರ್ಥಿಕ ವ್ಯವಹಾರ ಆರಂಭವಾಗಲು ಮತ್ತು ಮಹಿಳೆಯರೂ ವ್ಯವಹಾರ ನಡೆಸಲು ಆರಂಭವಾದದ್ದೇ ಸಹಕಾರಿ ಸಂಘಗಳ ಸ್ಥಾಪನೆಯಾದ ನಂತರ. ಪ್ರಧಾನಿಯವರ ಜನಧನ ಯೋಜನೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ. ೧೦೦ ಕುಟುಂಬಗಳು ಖಾತೆದಾರಾಗಿದ್ದಾರೆ ಎಂದರು. ಸವಣೂರು ಸೀತಾರಾಮ ರೈ ಮಾತನಾಡಿ ಸಹಕಾರಿ ಸಂಘದ ಬೆಳವಣಿಗೆ ಆಡಳಿತ ಮಂಡಳಿಯವರ ಶ್ರಮ ಮಾತ್ರ ಅಲ್ಲ, ಸದಸ್ಯರ ಕೈ ಜೋಡಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ಶಾಸಕ ಎಸ್. ಅಂಗಾರ ಮಾತನಾಡಿ ೧೯೭೮ರ ನಂತರ ಸಹಕಾರಿ ಸಂಘಗಳಿಗೆ ರಾಜಕೀಯ ಕ್ಷೇತ್ರ ಪ್ರವೇಶವಾದ ಬಳಿಕ ಸರಕಾರದ ಹಸ್ತಕ್ಷೇಪ ಶುರುವಾಯಿತು. ಸರಕಾರಕ್ಕೆ ಸಹಕಾರಿ ಸಂಘಗಳ ಬಗ್ಗೆ ಸ್ಪಷ್ಟವಾದ ನಿಲುವು ಇಲ್ಲದಿರುವುದರಿಂದ ಸಹಕಾರಿ ಸಂಘಗಳ ಬೆಳವಣಿಗೆಗೆ ತೊಡಕಾಗುತ್ತದೆ ಎಂದರು. ಕು. ಅಶ್ವಿನಿ ಕಟ್ಟರವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. ನಬಾರ್ಡ್‌ನ ಎ.ಜಿ.ಎಂ. ಎಸ್. ರಮೇಶ್ ರೈತ ಬಜಾರ್ ಉದ್ಘಾಟಿಸಿ ಶುಭ ಹಾರೈಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎನ್.ಕೆ. ಗೋಪಾಲಯ್ಯ, ಡಿ.ಸಿ.ಸಿ. ಬ್ಯಾಂಕ್‌ನ ಪುತ್ತೂರು ಪ್ರತಿನಿಧಿ ಶಶಿಕುಮಾರ್ ರೈ ಬಾಳ್ಯೊಟ್ಟು, ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ, ಗುತ್ತಿಗಾರು ವಲಯದ ಸಹಕಾರಿ ಸಂಘಗಳ ಮೇಲ್ವಿಚಾರಕ ಮನೋಜ್ ಕುಮಾರ್ ಮಾಣಿಬೈಲು, ಸಂಘದ ನಿರ್ದೇಶಕರುಗಳಾದ ಶ್ರೀಮತಿ ಲೀಲಾವತಿ ಗಿರಿಧರ್ ಉಪ್ಪಳಿಕೆ, ಕೆ.ವಿ. ವೆಂಕಟ್ರಮಣ ಕೆಂಬ್ರೋಳಿ, ಶ್ರೀಮತಿ ಅನಿತಾ ರೇಗಪ್ಪ ಗೌಡ ಪುಂಡಿಗದ್ದೆ, ದಯಾನಂದ ಕುಕ್ಕಪ್ಪನಮನೆ, ಪೂರ್ಣಚಂದ್ರ ತುಂಭತ್ತಾಜೆ, ಭಾಸ್ಕರ ಪೂಜಾರಿ ಉಜಿರ್‌ಕೋಡಿ, ಸುರೇಶ್ ನೆಕ್ರಾಜೆ, ಪೆರ್ನ ಪದ್ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಸ್. ರಾಘವೇಂದ್ರ ವಾರ್ಷಿಕ ವರದಿಯನ್ನು ವಾಚಿಸಿದರು. ಉಪಾಧ್ಯಕ್ಷ ಎನ್,ಕೆ. ಮನೋಹರ್ ನಾಳ ವಂದಿಸಿದರು. ಅತಿಥಿಗಳಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ನಬಾರ್ಡ್ ಎ.ಜಿ.ಎಂ. ಎಸ್. ರಮೇಶ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎನ್.ಕೆ. ಗೋಪಾಲಯ್ಯ, ಸೇರಿದಂತೆ ಸಂಘದ ಮಾಜಿ ಅಧ್ಯಕ್ಷರುಗಳಿಗೆ, ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯದರ್ಶಿಗಳಿಗೆ, ಸಿಬ್ಬಂದಿಗಳಿಗೆ, ನೂತನ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು. ಸಾವಿರಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭೋಜನವನ್ನು ಏರ್ಪಡಿಸಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.