ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಎನ್.ಸಿ.ಸಿ ಕೆಡೆಟ್ ಅಂತಿಮ ಬಿ.ಕಾಂ ವಿದ್ಯಾರ್ಥಿ ಕೃತೇಶ್ ಮದುವೆ ಗದ್ದೆ ನವ ದೆಹಲಿಯಲ್ಲಿ ೨೬ ಜನವರಿ ನಡೆದ ಪ್ರತಿಷ್ಟಿತ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಕರ್ನಾಟಕ ಮತ್ತು ಗೋವಾ ರಾಜ್ಯಗಳ ಒಟ್ಟು ೪೪,೦೦೦ ಎನ್.ಸಿ.ಸಿ ಕೆಡೆಟ್ಗಳಲ್ಲಿ ಅಂತಿಮವಾಗಿ ೧೦೬ ಕೆಡೆಟ್ಗಳು ಕರ್ನಾಟಕ ಮತ್ತು ಗೋವಾ ರಾಜ್ಯದಿಂದ ಆಯ್ಕೆಯಾಗಿರುತ್ತಾರೆ. ಈ ತಂಡದ ನಾಯಕನಾಗಿ ಭಾಗವಹಿಸುವ ಅವಕಾಶ ಕಾಲೇಜಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕೃತೇಶ್ ಅವರಿಗೆ ಲಭಿಸಿದೆ.ಇವರು ಸ್ನೇಹ ಶಿಕ್ಷಣ ಸಂಸ್ಥೆ, ಕೆ.ವಿ.ಜಿ ಹೈಸ್ಕೂಲ್, ಎನ್.ಎಂ.ಪಿ.ಯು.ಸಿ ಸುಳ್ಯ ಇಲ್ಲಿಯ ಹಿರಿಯ ವಿದ್ಯಾರ್ಥಿ ಹಾಗೂ ಅಲೆಟ್ಟಿಯ ನೂಜಿನ ಮೂಲೆ ಮದುವೆಗದ್ದೆ ಚಿದಾನಂದ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ. ಹಾಗೂ ದಿ.ರಾಮಕೃಷ್ಣ ಕೊಯಿಂಗಾಜೆಯವರ ಮೊಮ್ಮಗ.