HomePage_Banner
HomePage_Banner
HomePage_Banner
Breaking News

ಮರ್ಧೂರಡ್ಕ ಸ್ತ್ರೀ ಶಕ್ತಿ ಸಂಘದ ವತಿಯಿಂದ ಹಿರಿಯ ಮಹಿಳಾ ಆರೋಗ್ಯ ಸಹಾಯಕರಿಗೆ ಸನ್ಮಾನ

 

ಎಡಮಂಗಲ ಗ್ರಾಮದ ಮರ್ದೂರಡ್ಕ ಅಂಗನವಾಡಿ ಕೇಂದ್ರದಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಗೊಂಚಲು ಸಭೆಯು  ಜರುಗಿತು. ಸ್ತ್ರೀಶಕ್ತಿ ಸಂಘದ ವತಿಯಿಂದ ಇತ್ತಿಚೆಗಷ್ಟೆ ವರ್ಗಾವಣೆಗೊಂಡು ಸುಳ್ಯ ತಾಲೂಕು ಆಸ್ಪತ್ರೆಗೆ ತೆರಳಿದ ಶ್ರೀಮತಿ ಲೀಲಾವತಿ ಕಿ.ಮ.ಆ.ಸ. ಇವರು ಎಡಮಂಗಲ ಗ್ರಾಮದಲ್ಲಿ ಕಳೆದ ೧೬ ವರ್ಷಗಳಿದ ಕಿ.ಮ.ಆ.ಸ ಯಾಗಿ ಕರ್ತವ್ಯ ನಿರ್ವಹಿಸಿದ್ದು, ಅವರ ಉತ್ತಮ ಸೇವೆ ಹಾಗೂ ಜನಪ್ರಿಯತೆಯನ್ನು ಗುರುತಿಸಿ ಅವರನ್ನು ವೇದಿಕೆಯಲ್ಲಿ ಫಲ ತಾಂಬೂಲ, ಪುಷ್ಪ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹಾಗೂ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಆಶಾದೀಪ, ಹಿರಿಯ ನಾಗರಿಕರರಾದ ವಾರಿಜ ಕುಟಾಜೆ, ನವೋದಯ ಸ್ವ. ಸ. ಸಂಘದ ಪ್ರೇರಕರಾದ ಶ್ರೀ ರಾಮಣ್ಣ ಎಡಮಂಗಲ, ಪುಳಿಕುಕ್ಕು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸರೋಜಿನಿ ಶ್ರೀಚಂದ್ರ ಶಾಸ್ತ್ರಿ ಸರ್ಕಲ್ ಸುಳ್ಯ, ಉಪಸ್ಥಿತರಿದ್ದರು.

ಶ್ರೀಮತಿ ಸರೋಜಿನಿ ಲೋಕೇಶ್ವರಿಯವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ, ಶ್ರೀಮತಿ ವಾರಿಜ ಕೂಟಾಜೆ ಇವರು ಕಿರಿಯ ಆರೋಗ್ಯ ಸಹಾಯಕಿಯರನ್ನು ಶಾಲು ಹೊದಿಸಿ ಸನ್ಮಾನಿಸುವುದರ ಮೂಲಕ ಗೌರವಿಸಿದರು. ಶ್ರೀಮತಿ ಲೋಕೇಶ್ವರಿ ಅಂಗನವಾಡಿ ಕಾರ್ಯಕರ್ತೆ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ವಿಜಯ ರಾಮಣ್ಣ, ಆಶಾ ಕಾರ್ಯಕತೆ ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.