HomePage_Banner
HomePage_Banner

ಜಾಲ್ಸೂರು ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ 6ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ

ಜಾಲ್ಸೂರಿನ ಶ್ರೀ ಗುರುರಾಘ ವೇಂದ್ರ ಸ್ವಾಮಿ ಭಜನಾ ಮಂದಿರದ ಲ್ಲಿ ೬ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮವು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗ ದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಜ.೨೯ ರಂದು ಜರುಗಿತು.
ಜ.೨೯ರಂದು ಬೆಳಿಗ್ಗೆ ೧೨ ತೆಂಗಿನಕಾಯಿ ಗಣಪತಿ ಹವನ, ನಾಗತಂಬಿಲ, ಪಾದುಕಾಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ನಾಗ ಸಾನಿಧ್ಯದಲ್ಲಿ ಆಶ್ಲೇಷ ಬಲಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾಕೇಸರಿ ಜಾಲ್ಸೂರು ಸಾರಥ್ಯದಲ್ಲಿ ನೃತ್ಯ ಸಂಗಮ, ರಾತ್ರಿ ಶ್ರೀ ಗುರುರಾಘವೇಂದ್ರ ಸ್ವಾಮಿ ಗಳಿಗೆ ಅಲಂಕಾರಪೂಜೆ, ಪ್ರಸಾದ ವಿತರಣೆ, ರಾತ್ರಿ ಮಹಾಪೂಜೆ, ಅನ್ನ ಸಂತರ್ಪಣೆ ಜರುಗಿತು.

ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ಎಸ್. ಬಾಬು ಪಾಟಾಳಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಮಾಹೆ, ಮಣಿಪಾಲದ ಪ್ರಾಧ್ಯಾಪಕ ಡಾ|| ಸತೀಶ್ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿದರು.

ಸನ್ಮಾನ:
ಈ ಸಂದರ್ಭದಲ್ಲಿ ಭಜನಾಮಂದಿರದ ಸಭಾಭವನಕ್ಕೆ ತಾವು ತಾ.ಪಂ.ಅಧ್ಯಕ್ಷರಾಗಿದ್ದ ವೇಳೆ ಅನುದಾನ ಒದಗಿಸಿಕೊಟ್ಟ ಮಾಜಿ ತಾ.ಪಂ. ಅಧ್ಯಕ್ಷೆ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಎಪಿಎಂಸಿ ವತಿಯಿಂದ ಅನುದಾನ ಒದಗಿಸಿಕೊಟ್ಟ ಎ.ಪಿ.ಎಂ.ಸಿ. ಅಧ್ಯಕ್ಷ ದೇರಣ್ಣ ಗೌಡ, ಸಭಾಭವನ ನಿರ್ಮಾಣಕ್ಕೆ ಜೀವವಿಮೆಯಿಂದ ಅನುದಾನ ಒದಗಿಸಿಕೊಟ್ಟ ಎಲ್ಲೈಸಿ ಜೀವವಿಮಾ ಪ್ರತಿನಿಧಿ ಮಾಧವ ಗೌಡ ಜಾಲ್ಸೂರು, ಬೆಳ್ಳಾರೆ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಮೋಹನ ನಂಗಾರು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋನಪ್ಪ ಆಚಾರ್ಯ, ಜಾಲ್ಸುರಿನ ಯುವ ಸಾಧಕರುಗಳಾದ ಗಣೇಶ್ ಆಚಾರ್ಯ ಜಾಲ್ಸೂರು ಹಾಗೂ ಚಿನ್ನಪ್ಪ ಕದಿಕಡ್ಕ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಸನ್ಮಾನಿಸಿದರು.

ಭಜನಾ ಮಂದಿರದ ಖಜಾಂಜಿ ಪಿ.ವಿಷ್ಣು ಭಟ್ ಪೆರಂಬಾರು, ಪುತ್ತೂರಿನ ಎಲ್ಲೈಸಿ ಶಾಖಾ ಪ್ರಬಂಧಕ ವೆಂಕಟ್ರಮಣ ಶಿರೂರು, ಮಂದಿರದ ಅರ್ಚಕ ರಾಮಕೃಷ್ಣ ಭಟ್ ಪೆರಂಬಾರು ಗೌರವ ಉಪಸ್ಥಿತರಿದ್ದರು. ರಾತ್ರಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ ಚಲನಚಿತ್ರ ನಟ ಕುಸಲ್ದರಸೆ ನವೀನ್ ಡಿ. ಪಡೀಲ್ ಸಹಕಾರದೊಂದಿಗೆ, ಚಲನಚಿತ್ರ ನಟ ಸುಂದರ ರೈ ಮಂದಾರ ಅಭಿನಯದ ತುಳು ಹಾಸ್ಯಮಯ ನಾಟಕ ಜನನೇ ಬೇತೆ ಪ್ರದರ್ಶನಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.