Breaking News

ಎಡಮಂಗಲ: ಅವಳಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಸದ ನಳೀನ್ ಕುಮಾರ್ ಕಟೀಲ್ ಭೇಟಿ


ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಗಳು ಜೀರ್ಣೊದ್ದಾರಗೊಂಡು ಕೆಲವೇ ದಿನಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವುದು. ಈ ಸಂದರ್ಭದಲ್ಲಿ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಭೇಟಿ ನೀಡಿ ದೇವಸ್ಥಾನದ ಕೆಲಸ ಕಾರ‍್ಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ನನ್ನ ಪೂರ್ತಿ ಸಹಕಾರ ಇದೆ ಎಂದು ಹೇಳಿದರು.

೪ ವರ್ಷಗಳಿಂದ ಜೀರ್ಣೋದ್ದಾರ ಕಾಮಗಾರಿ ನಡೆದ ಬಗ್ಗೆ ಮತ್ತು ದೇವಳದ ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಸೊಸೈಟಿ ಅಧ್ಯಕ್ಷ ಮಾಲೆಂಗಿರಿ ರಾಮಕೃಷ್ಣ ರೈ ವಿವರಿಸಿದರು. ವಿಳ್ಲ ಕ್ಷೇತ್ರ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ , ಎ.ಪಿ.ಎಮ್.ಸಿ. ಸದಸ್ಯ ಜಾಕೆ ಸಂತೋಷ್, ಬಾಸ್ಕರ ರೈ ಮಂಗಳೂರು , ತಾ.ಪಂ. ಉಪಾಧ್ಯಕ್ಷೆ ಶುಭಾದ .ಎಸ್.ರೈ ,ಎಡಮಂಗಲ ಗ್ರಾ.ಪಂ. ಅಧ್ಯಕ್ಷ ಸುಂದರ ಗೌಡ ದೋಳ್ತಿಲ, ಉಪಾಧ್ಯಕ್ಷೆ ಮೋಹಿನಿಕೂಟಾಜೆ, ಪಂ. ಸದಸ್ಯ ಸುರೇಶ್ ಕಲ್ಲೆಂಬಿ, ಶಾಂತಿಕುಮಾರಿ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರ ಶೇಖರ ಮರಕ್ಕಡ, ಕಾರ್ಯಧ್ಯಕ್ಷ ರಾಧಾಕೃಷ್ಣ ರೈ ಮಲೆಂಗಿರಿ, ಸ್ವಾಗತ ಸಮಿತಿ ಅಧ್ಯಕ್ಷ ಮೋಹನ್‌ದಾಸ್ ಕೂಟಾಜೆ, ಆರ್ಥಿಕ ಸಮಿತಿ ಅಧ್ಯಕ್ಷ ಶೇಖರಗೌಡ ಎರ್ಕ, ವ್ಯವಸ್ಥಾಪನ ಸಮಿತಿ ಜೊತೆ ಕಾರ‍್ಯದರ್ಶಿ ರಾಮಣ್ಣ ಜಾಲ್ತೂರು, ಮರೋಳಿ ಗ್ರಾಮದ ಶಿರಾಡಿ ರಾಜನ್ ದೈವದ ಪ್ರತಿಷ್ಠಾ ಕಲಶೋತ್ಸವ ಅಧ್ಯಕ್ಷ ಈಶ್ವರ ಗೌಡ ಜಾಲ್ತಾರು, ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.