ಕರಿಕ್ಕಳ: ಅಕ್ರಮ ದನ ಸಾಗಾಟ- ಓಮ್ನಿ, ಬೈಕು ಸೇರಿ ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ

ಪರವಾನಗಿ ಇಲ್ಲದೆ ಅಕ್ರಮವಾಗಿ ವಿವಿಧ ತಳಿಯ ೪ ಹೋರಿ ಕರುಗಳನ್ನು ಕಾಲು ಕಟ್ಟಿ ಮಾರುತಿ ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದ ನಾಲ್ವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫೆ.೧ರಂದು ಮುಂಜಾನೆ ಕಲ್ಮಡ್ಕ ಗ್ರಾಮದ ಅಡಿಬಾಯಿ ಎಂಬಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಎಲ್ಲಿಂದಲೋ ಕಳ್ಳತನ ಮಾಡಿ ಹಿಂಸಾತ್ಮಕ ರೀತಿಯಲ್ಲಿ ಕಾಲು ಕಟ್ಟಿ ವಿವಿಧ ತಳಿಯ ೪ ಹೋರಿ ಕರುಗಳನ್ನು ಕಾಸರಗೋಡು ಕಸಾಯಿಖಾನೆಗೆ ಮಾರುತಿ ಓಮ್ನಿ ಕಾರಿನಲ್ಲಿ ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದ ಬೆಳ್ಳಾರೆ ಪೊಲೀಸರು ೪ ಮಂದಿಯನ್ನು ಬಂಧಿಸಿದ್ದಾರೆ. ಹಸೈನರ್ ತಾಜುದ್ದೀನ್ ಬಿನ್ ಅಬ್ದುಲ್ ಖಾದರ್ (೩೦ವರ್ಷ) ಹೈದರಾಲಿ ಬಿನ್ ಇಬ್ರಾಹಿಂ (೩೮ ವರ್ಷ) ಇಬ್ರಾಹಿಂ ಬಿನ್ ಅಬೂಬಕರ್ (೨೩ ವರ್ಷ) ಮಹಮ್ಮದ್ ಆಲಿ ಬಿನ್ ಮೂಸೆ (೨೬ ವರ್ಷ) ಬಂಧಿತ ಆರೋಪಿಗಳು. ಜಾನುವಾರುಗಳ ಒಟ್ಟು ಮೌಲ್ಯ ೪೦೦೦, ಹಾಗೂ ವಾಹನಗಳ ಅಂದಾಜು ಮೌಲ್ಯ ೨.೫೦ ಲಕ್ಷ ಎಂದು ಅಂದಾಜಿಸಲಾಗಿದೆ. ಓಮಿನಿ ಕಾರಿಗೆ ಬೆಂಗಾವಲಾಗಿದ್ದ ಮೋಟಾರ್ ಸೈಕಲ್ ನಂ ಏಂ೨೧ಕಿ ೪೫೪೪ನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.