HomePage_Banner
HomePage_Banner
HomePage_Banner
Breaking News

ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಫೆ.೯ರಂದು ಸುಳ್ಯದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆ

ರೈತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ, ೨೦೧೮-೧೯ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಶ್ರಯದಲ್ಲಿ ಫೆ.೯ರಂದು ಸುಳ್ಯ ತಾಲೂಕು ಕಛೇರಿ ಎದುರು ಪ್ರತಿಭಟನಾ ಸಭೆ ನಡೆಯಲಿದೆ.
ರೈತ ಸಂಘ ಹಾಗೂ ಹಸಿರು ಸೇನೆಯ ಅರಂತೋಡು ತೊಡಿಕಾನ ವಲಯ ಘಟಕದ ಅಧ್ಯಕ್ಷ ತೀರ್ಥರಾಮ ಗೌಡ ಪರ್ನೋಜಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಅಂದು ಬೆಳಿಗ್ಗೆ ೧೦ರಿಂದ ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿಯಿಂದ ತಾಲೂಕು ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆದು ಬಳಿಕ ಸಭೆ ನಡೆಯಲಿದೆ ಎಂದವರು ತಿಳಿಸಿದರು.
ರೈತರ ಬೇಡಿಕೆಗಳೇನು?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೩೦೦೦ ಹೆಕ್ಟೇರ್‌ಗಿಂತಲೂ ಹೆಚ್ಚು ಅಡಿಕೆ ತೋಟಗಳು ಎಲೆ ಹಳದಿ ರೋಗದಿಂದ ನಾಶ ಹೊಂದಿದ್ದು, ಈ ರೈತರಿಗೆ ಎಕರೆಗೆ ಕನಿಷ್ಠ ರೂ. ಹತ್ತು ಲಕ್ಷ ಪರಿಹಾರ ನೀಡಬೇಕು. ತೆಂಗು ಬೆಳೆಗಾರರು ವರ್ಷಕ್ಕೆ ಒಂದು ಸಾವಿರದಿಂದ ಒಂದುಸಾವಿರದ ಇನ್ನೂರವೈತ್ತು ಕೋಟಿ ರೂ.ಗಳಷ್ಟು ನಷ್ಟವನ್ನು ಕೇವಳ ಮಂಗಗಳ ಉಪಟಳದಿಂದ ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಒಂದು ಮಂಕಿಪಾರ್ಕ್ ನಿರ್ಮಿಸಬೇಕು. ರಬ್ಬರ್ ಬೆಳೆಗಾರರ ಹಿತದೃಷ್ಟಿಯಿಂದ ಕೇರಳ ಸರಕಾರದ ಮಾದರಿಯಲ್ಲೇ ಇಲ್ಲೂ ಕೂಡ ಸರಕಾರ ಮಾರುಕಟ್ಟೆ ಮಧ್ಯಪ್ರವೇಶ್ ಯೋಜನೆ ಕೈಗೆತ್ತಿಕೊಂಡು ಪ್ರತೀ ಕ್ವಿಂಟಾಲ್ ರಬ್ಬರ್‌ಗೆ ಕನಿಷ್ಠ ಹದಿನಾರು ಸಾವಿರ ರೂ. ಬೆಲೆ ನಿಗದಿ ಮಾಡುವುದಲ್ಲದೆ ರೂ. ನೂರು ಕೋಟಿಯಷ್ಟು ಆವರ್ತನಿಧಿ ಸ್ಥಾಪಿಸಬೇಕು. ವನ್ಯ ಪ್ರಾಣಿಗಳ ಹಾವಳಿಯಿಂದ ರೈತರನ್ನು ಸಂರಕ್ಷಿಸಲು ಯೋಜನೆ ರೂಪಿಸಬೇಕು. ತೀವ್ರ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವುದಲ್ಲದೆ ರೈತರ ಕೃಷಿ ನೀರಾವರಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ಕನಿಷ್ಠ ಎಂಟು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದರು.
ಯಾರೆಲ್ಲಾ ಭಾಗವಹಿಸುತ್ತಾರೆ?
ಈ ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರುಗಳಾದ ರವಿಕಿರಣ್ ಪುಣಚ, ಸುರೇಶ್ ಭಟ್ ಕೊಜಂಬೆ, ರೋನಿ ಮೆಂಡೋನ್ಸಾ, ಪ್ರಸಾದ್ ಶೆಟ್ಟಿ ಪೆರಾಬೆ, ಪ್ರೇಮನಾಥ ಶೆಟ್ಟಿ ಬಾಳ್ತಿಲ, ಶ್ರೀನಿವಾಸ ನಿಡಿಂಜಿ, ಸುಧಾಕರ ಜೈನ್ ಭಾಗವಹಿಸುವರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ತಾರನಾಥ ಕುದ್ಪಾಜೆ, ಸಂಚಾಲಕ ದಿವಾಕರ ಪೈ ಮಜಿಗುಂಡಿ, ಮರ್ಕಂಜ ಗ್ರಾಮ ಘಟಕಾಧ್ಯಕ್ಷ ಕುಸುಮಾಧರ ಗೌಡ ಕೊಜಂಬೆ, ಉಬರಡ್ಕ ಗ್ರಾಮ ಘಟಕದ ಅಧ್ಯಕ್ಷ ರೋಹನ್ ಪೀಟರ್, ದೇವಪ್ಪ ಗೌಡ ತೊಡಿಕಾನ ಪತ್ರಿಕಾಗೋಷ್ಟಿಯಲ್ಲಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.