ಫೆ.೧೦ರಂದು ಸುಳ್ಯದಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ-ಕೊಡಿಯಾಲಬೈಲ್ ಸಾರ್ವಜನಿಕ ರುದ್ರಭೂಮಿ ಉದ್ಘಾಟನೆ- ಆರೋಗ್ಯ ಶಿಬರ

ಸುಳ್ಯ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಫೆ.೧೦ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ ನಡೆಯಲಿದ್ದು, ಕೊಡಿಯಾಲಬೈಲಿನಲ್ಲಿ ಉಬರಡ್ಕ ಪಂಚಾಯತ್ ಹಾಗೂ ಲಯನ್ಸ್ ಸಭಾಗಿತ್ವದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ರುದ್ರಭೂಮಿ ಹಾಗೂ ಉಚಿತ ಕೃತಕ ಕಾಲುಜೋಡಣೆ ಶಿಬರ ನಡೆಯಲಿದೆ ಎಂದು ಲಯನ್ಸ್ ಪ್ರಾಂತೀಯ ಸಮಿತಿ ಚೆಯರ್‌ಮೆನ್ ಪಿ.ಎಮ್. ರಂಗನಾಥ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಉಬರಡ್ಕದ ಕೊಡಿಯಾಲಬೈಲಿನಲ್ಲಿ ೫೦ಸೆಂಟ್ಸ್ ಜಾಗದಲ್ಲಿ ಸಾರ್ವಜನಿಕ ರುದ್ರಭೂಮಿ ೫೦ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಳ್ಳುತ್ತಿದ್ದು, ಪಂಚಾಯತ್ ಮತ್ತು ಲಯನ್ಸ್ ಪ್ರಾಂತೀಯ ಸಂಸ್ಥೆ ನೇತೃತ್ವ ವಹಿಸಿದೆ. ೪೦ಲಕ್ಷದಷ್ಟು ಸರ್ಕಾರದ, ಶಾಸಕರ, ಸಂಸದರ ಅನುದಾನ, ಪಂಚಾಯತ್ ಅನುದಾನದಿಂದ ಬಳಿಸಿಕೊಳ್ಳಲಾಗಿದೆ. ೫ಲಕ್ಷ ಧರ್ಮಸ್ಥಳ ಕ್ಷೇತ್ರದಿಂದ, ೫ಲಕ್ಷ ಲಯನ್ಸ್ ಸದಸ್ಯರ ಸಹಕಾರದಿಂದ ಬಂದಿರುತ್ತದೆ. ಉದ್ಯೋಗ ಖಾತರಿ ಯೋಜನೆಯ ಮೂಲಕ ಕೆಲಸ ನಿರ್ವಹಿಸಲಾಗಿದೆ. ಈ ಯೋಜನೆಯ ಮೇಲ್ವಿಚಾರಣೆ ರೂಪದಲ್ಲಿ ಲಯನ್ಸ್ ಪ್ರಾಂತೀಯದ ಸದಸ್ಯರು ಸಾರ್ವಜನಿಕ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ವಿಮುಕ್ತಿ ಎಂಬ ಹೆಸರಿನ ಈ ಸಾರ್ವಜನಿಕ ರುದ್ರಭೂಮಿ ಎಲ್ಲಾ ವ್ಯವಸ್ಥೆಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡು ಫೆ.೧೦ರಂದು ಉದ್ಘಾಟನೆಗೊಳ್ಳಲಿದೆ.
ಲಯನ್ಸ್ ಜಿಲ್ಲೆ ೪ರ ಪ್ರಾಂತೀಯ ಸಮ್ಮೇಳನದಲ್ಲಿ ವಿಟ್ಲ, ಪುತ್ತೂರು, ಕಡಬ, ಪಂಜ, ಗುತ್ತಿಗಾರು, ಸಂಪಾಜೆ, ಜಾಲ್ಸೂರು ಹಾಗೂ ಸುಳ್ಯ ಸೇರಿದಂತೆ ಒಟ್ಟು ೮ಕ್ಲಬ್‌ಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲಾ ಲಯನ್ಸ್ ಕ್ಲಬ್‌ಗಳ ಸಹಕಾರದೊಂದಿಗೆ ಉಚಿತ ಕೃತಕ ಕಾಲುಜೋಡಣೆ ಶಿಬರ ನಡೆಯಲಿದೆ ಎಂದು ಲಯನ್ಸ್ ಪದಾಧಿಕಾರಿಗಳು ತಿಳಿಸಿದರು. ಪತ್ರಕಾಗೋಷ್ಟಿಯಲ್ಲಿ ಜಯರಾಮ ದೇರಪ್ಪಜ್ಜನ ಮನೆ, ಹರೀಶ್ ರೈ ಉಬರಡ್ಕ, ಮಮತ ಕುದ್ಪಾಜೆ, ಎಮ್.ಬಿ ಸದಾಶಿವ, ಚಂದ್ರಶೇಖರ ನಂಜೆ, ರೂಪಾಶ್ರೀ ಜೆ.ರೈ, ದಿವ್ಯ ನಂಜೆ, ಹರಿಪ್ರಸಾದ್ ಪಾನತ್ತಿಲ, ಶಶಿಧರ ನಾಯರ್, ಬಿ.ಟಿ ಬೆಟ್ಟು, ಅಮೈ ದಾಮೋದರ ಗೌಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.