HomePage_Banner
HomePage_Banner
Breaking News

ಸುಳ್ಯ ವೆಂಕಟರಮಣ ಸೊಸೈಟಿ ಕಟ್ಟಡಕ್ಕೆ ಹೊಸ ರೂಪ – ಪ್ರಥಮ ಅಂತಸ್ತು, ಪ್ರಧಾನ ಕಛೇರಿ ಫೆ. ೧೧ರಂದು ಉದ್ಘಾಟನೆ

ಸುಳ್ಯದ ಮೊಗರ್ಪಣೆಯಲ್ಲಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಟ್ಟಡಕ್ಕೆ ಈಗ ಪ್ರಥಮ ಅಂತಸ್ತು ನಿರ್ಮಾಣವಾಗಿದ್ದು, ಕಟ್ಟಡಕ್ಕೆ ಹೊಸರೂಪ ಬಂದಿದೆ. ಈ ಮೊದಲ ಅಂತಸ್ತು ಮತ್ತು ಪ್ರಧಾನ ಕಛೇರಿಯ ಉದ್ಘಾಟನೆಯು ಫೆ.೧೧ರಂದು ನೆರವೇರಲಿದೆ.
ಸೊಸೈಟಿ ಕಟ್ಟಡದ ಅಂಗಳವನ್ನು ಹೊಸದಾಗಿ ಇಂಟರ್‌ಲಾಕ್ ಅಳವಡಿಸಿ ವಿಶಾಲಗೊಳಿಸಲಾಗುತ್ತಿದೆ. ಹೂತೋಟ ಮತ್ತು ಬೇಲಿಯನ್ನು ತೆಗೆಯಲಾಗಿದೆ. ಅದರ ಪಕ್ಕದಲ್ಲಿದ್ದ ಬೊಳ್ಳೂರು ಪದ್ಮಯ್ಯ ಗೌಡರ ನಾಲ್ಕು ಸೆಂಟ್ಸ್ ಜಾಗ ಖರೀಸಲಾಗಿದೆ. ಈ ಎಲ್ಲಾ ಜಾಗಕ್ಕೆ ಏಕರೂಪದಲ್ಲಿ ಇಂಟರ್‌ಲಾಕ್ ಅಳವಡಿಸುವುದರಿಂದ ಪಾರ್ಕಿಂಗ್ ಏರಿಯಾ ವಿಶಾಲವಾಗಿ ಕಾಣುವಂತಾಗಿದೆ.
ಫೆ. ೧೧ರಂದು ನಡೆಯಲಿರುವ ಬ್ಯಾಂಕಿನ ಮೊದಲ ಅಂತಸ್ತು ಹಾಗೂ ಪ್ರಧಾನ ಕಛೇರಿಯ ಉದ್ಘಾಟನೆಯ ಕುರಿತು ಬ್ಯಾಂಕಿನ ಅಧ್ಯಕ್ಷ ಚಂದ್ರ ಕೋಲ್ಚಾರ್‌ರವರು ಪತ್ರಿಕಾಗೋಷ್ಠಿ ಕರೆದು ವಿವರ ನೀಡಿದರು. ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಸ್ವಾಮೀಜಿಯವರಾದ ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಪ್ರಥಮ ಅಂತಸ್ತನ್ನು ಉದ್ಘಾಟಿಸುವರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ಪ್ರಧಾನ ಕಛೇರಿಯ ಉದ್ಘಾಟನೆ ನೆರವೇರಿಸಲಿರುವರು.
ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ಶಾಸಕ ಎಸ್.ಅಂಗಾರ, ಜಂಟಿ ನಿಬಂಧಕ ಹೆಚ್.ಸಿ. ಜೋಶಿ, ಡಾ. ಕೆ.ವಿ.ಚಿದಾನಂದ, ಪಿ.ಸಿ.ಜಯರಾಮ್, ನಿತ್ಯಾನಂದ ಮುಂಡೋಡಿ, ಡಾ.ರೇಣುಕಾಪ್ರಸಾದ್ ಕೆ.ವಿ., ಶ್ರೀಮತಿ ಶೀಲಾವತಿ ಮಾಧವ, ಮತ್ತು ದಿನೇಶ್ ಮಡಪ್ಪಾಡಿಯವರು ಅತಿಥಿಗಳಾಗಿ ಆಗಮಿಸಿ ವಿವಿಧ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಎಸ್.ಗಂಗಾಧರ್, ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಕೆ.ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ, ಲಕ್ಷ್ಮೀನಾರಾಯಣ ನಡ್ಕ, ಮೋಹನ್‌ರಾಮ್ ಸುಳ್ಳಿ, ದಾಮೋದರ ಎನ್.ಎಸ್., ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಉಪಸ್ಥಿತರಿದ್ದರು.

ಕೋರ್‌ಬ್ಯಾಂಕ್ ಸಿಸ್ಟಂ
ವೀಡಿಯೋ ಕಾನ್ಫರೆನ್ಸ್ ಅಳವಡಿಕೆ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮೊದಲ ಅಂತಸ್ತಿನಲ್ಲಿ ಪ್ರಧಾನ ಕಛೇರಿ ಆರಂಭಗೊಂಡ ಬಳಿಕ ಈಗಿನ ವೆಂಕಟರಮಣ ಬ್ಯಾಂಕ್ ಸುಳ್ಯ ಶಾಖೆಯಾಗಿ ಪರಿವರ್ತನೆಗೊಳ್ಳಲಿದೆ. ವಿಶಾಲವಾದ ಮೀಟಿಂಗ್ ಹಾಲ್, ಎಲ್ಲಾ ಬ್ರಾಂಚ್‌ಗಳ ಆಡಳಿತ ವಿಭಾಗಗಳು, ತರಬೇತಿ ಸಭಾಂಗಣ, ಮೇಲ್ಗಡೆ ಪ್ರಧಾನ ಕಛೇರಿಯಲ್ಲಿ ಇರುತ್ತದೆ. ಎಲ್ಲಾ ೮ ಬ್ರಾಂಚ್‌ಗಳ ಸಿಬ್ಬಂದಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸುವ ಪರದೆ ಅಳವಡಿಕೆ ಆಗಲಿದ್ದು, ಇಲ್ಲೇ ಕುಳಿತು ಆಡಳಿತ ನಿಯಂತ್ರಿಸಲು, ಸಾಲದ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ತರಿಸಿಕೊಂಡು ಪರಿಶೀಲಿಸಲು ಸಾಧ್ಯವಾಗುತ್ತದೆ. ಜೊತೆಗೆ ಕೋರ್‌ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.