ಐವರ್ನಾಡು : ಕುಳ್ಳಂಪಾಡಿ ಕಾಲೊನಿ ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ

Advt_Headding_Middle
Advt_Headding_Middle

ಕುಳ್ಳಂಪಾಡಿ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ಎಸ್.ಸಿ.ಪಿ. ಯೋಜನೆಯಲ್ಲಿ ರೂ ೧೦ ಹಾಗೂ ಕಿಂಡಿ ಅಣೆಕಟ್ಟಿಗೆ ರೂ ೨೦ ಲಕ್ಷ ಮಂಜೂರಾಗಿದ್ದು ಅದರ ಗುದ್ದಲಿ ಪೂಜೆಯು ಫೆ. ೨ ರಂದು ನಡೆಯಿತು.
ಶಾಸಕ ಎಸ್. ಅಂಗಾರರವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಕಾಂಕ್ರೀಟೀಕರಣ ಕೆಲಸ ಆದಷ್ಟು ಬೇಗ ಆಗಿ ಈ ಭಾಗದ ಎಲ್ಲಾ ಜನರಿಗೆ ಉಪಯೋಗವಾಗಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ನಿರ್ದೇಶಕ ನವೀನ್ ಕುಮಾರ್ ಸಾರಕರೆ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಪುಪ್ಪಾವತಿ ಬಾಳಿಲ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ, ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಸದಸ್ಯರಾದ ರಾಜೀವಿ ಲಾವಂತಡ್ಕ, ಶ್ರೀಮತಿ ಸುಜಾತ ಪವಿತ್ರಮಜಲು ದೇವರಕಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಲ್ಯಣ್ಣ ಗೌಡ ಕುಳ್ಳಂಪಾಡಿ, ರಾಧಾಕೃಷ್ಣ ಮಿತ್ತಮೂಲೆ,ಹರ್ಷ ಗೌಡ ಕುಳ್ಳಂಪಾಡಿ,ಭರತ್ ಕುಮಾರ್,ಜನಾರ್ಧನ ಎಡಮಲೆ,ಗಣೇಶ ಕುಳ್ಳಂಪಾಡಿ,ಚನಿಯಪ್ಪ ಕುಳ್ಳಂಪಾಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ನವೀನ್ ಕುಮಾರ್ ಸಾರಕರೆ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.