ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಧ್ವಜಾರೋಹಣ ಮೂಲಕ ಉರೂಸಿಗೆ ಚಾಲನೆ

Advt_Headding_Middle
Advt_Headding_Middle
Advt_Headding_Middle

ಝಕರಿಯಾ ಜುಮಾ ಮಸೀದಿಯಲ್ಲಿ ಫೆಬ್ರವರಿ ೭ ರಿಂದ ೧೧ ರವರೆಗೆ ಚರಿತ್ರೆ ಪ್ರಸಿದ್ದ ಬೆಳ್ಳಾರೆ ವಲಿಯುಲ್ಲಾಹಿ ಮಖಾಂ ಉರೂಸ್ ನಡೆಯಲಿರುದು. ಫೆಬ್ರವರಿ ೭ ರಂದು ಬೆಳ್ಳಾರೆ ದರ್ಗಾ ಶರೀಫಿನಲ್ಲಿ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಖತೀಬರಾದ ತಾಜುದ್ದೀನ್ ರಹ್ಮಾನಿ ಯವರ ನೇತೃತ್ವದಲ್ಲಿ ಕೂಟು ಝಿಯಾರತ್ ನಡೆಸಿ ದುವಾರ್ಶೀವಚನ ನಡೆಸಿದರು. ಆ ಬಳಿಕ ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಆಡಳಿತ ಮಂಡಳಿಯ ಅಧ್ಯಕ್ಷ ರೂ, ಊರೂಸ್ ಸಮಿತಿಯ ಅಧ್ಯಕ್ಷ ರಾದ ಕೆ ಎಂ ಮಹಮ್ಮದ್ ಹಾಜಿ ಬೆಳ್ಳಾರೆಯವರು ಧ್ವಜಾರೋಹಣ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು .ಈ ಸಂದರ್ಭದಲ್ಲಿ ಬೆಳ್ಳಾರೆ ಮಸೀದಿಯ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ, ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಯು.ಹೆಚ್ ಅಬೂಬಕ್ಕರ್, ಮಸೀದಿಯ ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ, ಹಿದಾಯ ಎಜುಕೇಶನಲ್ ಟ್ರಸ್ಟ್ ಬೆಳ್ಳಾರೆಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಬೆಳ್ಳಾರೆ ಮಸೀದಿಯ ಆಡಳಿತ ಮಂಡಳಿ ಸದಸ್ಯರುಗಳಾದ ಆಶೀರ್ ಎ.ಬಿ , ಬಿ .ಎ ಬಶೀರ್, ಯು.ಪಿ ಬಶೀರ್, ಮಸೀದಿಯ ಜೊತೆ ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಜಮಾಲುದ್ದೀನ್ ಕೆ ಎಸ್,ಹಾಗೂ ಜಮಾಅತಿನ ಸದಸ್ಯರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಬೆಳ್ಳಾರೆ ಜಮಾಅತಿನ ಆಡಳಿತ ಮಂಡಳಿಯ ಸದಸ್ಯರಾದ ಕೆ.ಎ ಬಶೀರ್ ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.