Breaking News

ಸುಳ್ಯ – ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸ್ಯಾಟಿಯಲ್ಲಿ ವಿಜೃಂಭಣೆಯಿಂದ ನಡೆದ ಪೂಜಾ ಕಾರ್ಯಕ್ರಮ


ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸ್ಯಾಟಿಯ ಪ್ರಥಮ ಅಂತಸ್ತು ಮತ್ತು ಪ್ರಧಾನ ಕಚೇರಿಯು ಫೆ.೧೧ರಂದು ಲೋಕಾರ್ಪಣೆಯಾಗಲಿದೆ. ಈ ಪ್ರಯುಕ್ತ ನೂತನ ಕಚೇರಿಯಲ್ಲಿ ಗಣಪತಿ ಹೋಮ, ವಾಸ್ತು ಪೂಜೆ, ಲಕ್ಷ್ಮಿ ಪೂಜೆಯು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸ್ಯಾಟಿಯ ಅಧ್ಯಕ್ಷರಾದ ಚಂದ್ರಾ ಕೋಲ್ಚಾರು, ಉಪಾಧ್ಯಕ್ಷರಾದ ಪಿ.ಎಸ್ ಗಂಗಾಧರ್, ಕಾರ್ಯನಿರ್ವಾಹಣಾಧಿಕಾರಿ ಕೆ.ಟಿ ವಿಶ್ವನಾಥ್, ನಿರ್ದೇಶಕರಾದ ಪಿ.ಸಿ. ಜಯರಾಮ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಕೆ.ಸಿ. ನಾರಾಯಣ ಗೌಡ, ಮೋಹನ್‌ಕುಮಾರ್ ಸುಳ್ಳಿ, ದಿನೇಶ್ ಮಡಪ್ಪಾಡಿ, ಲಕ್ಷ್ಮಿನಾರಾಯಣ್ ನಡ್ಕ, ಜಯಲಲಿತಾ ಕೆ.ಎಸ್, ನಳಿನಿ ಸೂರಯ್ಯ, ಲತಾ ಸದಾನಂದ ಮಾವಾಜಿ, ಗೌಡ ಸಂಘದ ನಿರ್ದೇಶಕರಾದ ಕೆ.ವಿ. ಹೇಮನಾಥ್, ಯು.ಜಿ ಗಣಪಾಲ್, ತೇಜಪ್ರಸಾದ್ ಅಮೆಚೂರು ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.