ಬಳ್ಪದಲ್ಲಿ ಇಂದು ದ.ಕ. ಸಂಸದರ ಆದರ್ಶಗ್ರಾಮದ ಗ್ರಾಮೋತ್ಸವ ಕಾರ್ಯಕ್ರಮ

 

 

ಮಾನ್ಯ ಪ್ರಧಾನಮಂತ್ರಿಯವರ ಪರಿಕಲ್ಪನೆ ಸಂಸದ ಆದರ್ಶ ಗ್ರಾಮ ಇದರ ಯೋಜನೆಯಡಿಯಲ್ಲಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಸೇವಾ ಕೇಂದ್ರ ಬಳ್ಪ ಮತ್ತು ಗ್ರಾಮ ವಿಕಾಸ ಪ್ರತಿಷ್ಠಾನ, ಬಳ್ಪ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ ವೈಭವ ಉದ್ಘಾಟನೆ ಕಾರ್ಯಕ್ರಮವು ಇಂದು ಸಂಜೆ 5ಕ್ಕೆ ಬಳ್ಪ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮ ಅನುಷ್ಠಾನದ ಮಾಹಿತಿ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸೇವಾಕೇಂದ್ರ ಬಳ್ಪ
ಕೇನ್ಯ ನೂತನ ಅಂಗನವಾಡಿ ಕೇಂದ್ರ ಕಟ್ಟಡ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಣ್ಣೆಮಜಲು ಇದರ ನವೀಕೃತ ತರಗತಿ ಕೊಠಡಿಗಳು
ಬಳ್ಪ ಗ್ರಾಮ ಪಂಚಾಯತ್ ಕಛೇರಿಗೆ ಸೋಲಾರ್ ಪವರ್ ಬ್ಯಾಕ್ ಆಪ್
ಗ್ರಾಮ ವಿಕಾಸ ಯೋಜನೆಯ ಪ್ರಥಮ ಹಂತದ ಕಾಮಗಾರಿಗಳ ಲೋಕಾರ್ಪಣೆ
ಮೇಸ್ಕಾಂ ವಿದ್ಯುತ್ ಪರಿವರ್ತಕ ಲೋಕಾರ್ಪಣೆ
ವಸತಿ ರಹಿತ ಬಡ ಕುಟುಂಬದ ಫಲಾನುಭವಿಗಳಿಗೆ ಮನೆ ನಿರ್ಮಾಣ ಕಾಮಗಾರಿ ಆದೇಶ ವಿತರಣೆ
ಪ್ರಯಾಣಿಕರ ಬಸ್ಸು ತಂಗುದಾಣ
ಬಳ್ಪ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಸಭಾಭವನಕ್ಕೆ ಟೈಲ್ಸ್ ಅಳವಡಿಸಿ ಅಭಿವೃದ್ಧಿ ಪಡಿಸುವುದು
ಅಡ್ಡಬೈಲು ಎಂಬಲ್ಲಿ ಶಿಶುಪಾಲನ ಕೇಂದ್ರ ನಿರ್ಮಾಣ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ನಡೆಯಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಅಂಗಾರ, ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಸಾಮಾಜಿಕ ಕಾರ್ಯಕರ್ತರಾದ ಬಿ. ಎಲ್. ಸಂತೋಷ್ ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು ಇದರ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು,, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್, ಆಳ್ವಾಸ್ ವಿದ್ಯಾ ಸಂಸ್ಥೆಗಳು, ಮೂಡಬಿದಿರೆಯ ಅಧ್ಯಕ್ಷರಾದ ಡಾ| ಮೋಹನ್ ಅಳ್ವ, ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು ಇದರ ಸದಸ್ಯರಾದ ಆಶಾ ತಿಮ್ಮಪ್ಪ, ತಾಲೂಕು ಪಂಚಾಯತ್ ಸುಳ್ಯದ ಅಧ್ಯಕ್ಷರಾದ ಚನಿಯ ಕಲ್ತಡ್ಕ, ತಾಲೂಕು ಪಂಚಾಯತ್ ಸುಬ್ರಹ್ಮಣ್ಯ ಕ್ಷೇತ್ರದ ಸದಸ್ಯರಾದ ಅಶೋಕ್ ನೆಕ್ರಾಜೆ, ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಮೂಡ್ನೂರು, ದ.ಕ.ಜಿ.ಪಂಚಾಯತ್, ಮಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಡಾ| ಎಂ. ಆರ್. ರವಿ, ಸುಳ್ಯ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ
ಮಧುಕುಮಾರ್, ದ.ಕ.ಜಿ.ಪಂ. ಉಪವಿಭಾಗ ಸುಳ್ಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾಗರಾಜ್ ಸಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎನ್.ಎಂ.ಪಿ.ಟಿ. ಮಂಗಳೂರು ಇದರ ಛೇರ್‌ಮನ್ ಎಸ್.ಪಿ. ಶಿರ್ವಡ್ಕರ್, ಸಿ.ಎಂ.ಡಿ, ಕೆ.ಐ.ಓ.ಸಿ.ಎಲ್. ಮಂಗಳೂರು ಇದರ ಎಂ.ವಿ. ಸುಬ್ಬರಾವ್, ರಿಫೈನರಿ, ಎಂ.ಆರ್.ಪಿ.ಎಲ್ ಮಂಗಳೂರು ಇದರ ಡೈರೆಕ್ಟರ್ ವೆಂಕಟೇಶ್, ಐ.ಟಿ.ಎಸ್, ಬಿ.ಎಸ್.ಎನ್.ಎಲ್. ಮಂಗಳೂರಿನ ಜಿ.ಆರ್. ರವಿ, ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ಎಕ್ಸಿಕ್ಯುಟಿವ್ ಡೈರೆಕ್ಟರಾದ ಎಸ್. ವರದಾಚರಿ, ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯ ಡೆಪ್ಯುಟಿ ಜನರಲ್ ಮ್ಯಾನೇಜರಾದ ಎಂ. ವಸಂತ ರಾವ್, ವಿಜಯ ಬ್ಯಾಂಕ್‌ನ ರಿಜಿನಲ್ ಮ್ಯಾನೇಜರಾದ ಎ. ಶ್ರೀಧರ್ ಮೂರ್ತಿ, ಪುತ್ತೂರಿನ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಎಸ್. ಆರ್. ಸತೀಶ್ಚಂದ್ರ, ದ.ಕ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಮಂಗಳೂರಿನ ಸುಧಾಕರ್, ಮೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ನಾರಾಯಣ ಪೂಜಾರಿ ಮೊದಲಾದ ಗಣ್ಯರು ಉಪಸ್ಥಿತಿಯನ್ನು ವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.