ಸುಬ್ರಹ್ಮಣ್ಯಕ್ಕೆ ಬಂದು ಹಣವಿಲ್ಲದೆ ಕಂಗಾಲಾದ ಪ್ರೇಮಿಗಳು… ಬಳಿಕ ಆಗಿದ್ದೇನು!?

ಊರಿಗೆ ಮರಳಲು ದುಡ್ಡಿಲ್ಲದೆ ಕಂಗಾಲಾಗಿದ್ದ ಹಾಸನದ ಯುವ ಪ್ರೇಮಿಗಳನ್ನು ಕಡಬ ಠಾಣೆ ಪೊಲೀಸರು ಊರಿಗೆ ಕಳುಹಿಸಿದ ಘಟನೆ ನಡೆದಿದೆ.

ಯುವ ಪ್ರೇಮಿಗಳು ಮನೆ ಮಂದಿಗೆ ತಿಳಿಸದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರೈಲಿನಲ್ಲಿ ಬಂದಿದ್ದರು. ಆದರೆ ತಂದ ಹಣವೆಲ್ಲ ಖರ್ಚಾಗಿ ಕೊನೆಗೆ ಊಟ ಮಾಡಲು, ಊರಿಗೆ ಮರಳಲು ಸಾಧ್ಯವಾಗದೆ ನೆಟ್ಟಣ ರೈಲು ನಿಲ್ದಾಣದಲ್ಲಿ ಕುಳಿತಿದ್ದರು.

ಹಾಸನದ ನಿವಾಸಿಯಾಗಿರುವ ಯುವಕ ನೂತನ್ ಹಾಸ್ಟೆಲ್‌ನಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದ. ತನ್ನ ಪ್ರೇಯಸಿಯನ್ನು ಕುಕ್ಕೆ ಕ್ಷೇತ್ರಕ್ಕೆ ಕರೆದುಕೊಂಡು ಬಂದಿದ್ದ. ಆದರೆ ಬಳಿಕ ದುಡ್ಡಿಲ್ಲದೆ ರೈಲು ನಿಲ್ದಾಣದಲ್ಲಿ ಕಂಗಾಲಾಗಿ ಕುಳಿತಿದ್ದರು. ಈ ಪ್ರೇಮಿಗಳನ್ನು ಗಮನಿಸಿದ ಸ್ಥಳೀಯರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಇವರಿಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಹೆತ್ತವರನ್ನು ಸಂಪರ್ಕಿಸಿ, ಅವರನ್ನು ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಂಡು ಊರಿಗೆ ಕಳುಹಿಸಲಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

 

website ಜಾಹೀರಾತಿಗಾಗಿ ಸಂಪರ್ಕಿಸಿ : 9481872949

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.