ಡಾ ಅನಿತಾ.ಕೆ.ಎನ್‌ರವರಿಗೆ ಪಿ.ಹೆಚ್.ಡಿ. ಪದವಿ

ಡಾ ಅನಿತಾ.ಕೆ.ಎನ್ ರವರು ಡಾ.ಬಿ.ಎಸ್.ರೆಡ್ಡಿ ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ರೋಲ್ ಆಫ್ ಜ್ಯುಡಿಶಿಯರಿ ಇನ್ ಪ್ರೊಟೆಕ್ಷನ್ ಆಫ್ ಹ್ಯೂಮನ್ ರೈಟ್ಸ್ ಆಫ್ ವಿಮೆನ್ ಇನ್ ಇಂಡಿಯಾ ಎಂಬ ಮಹಾಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಡಾ ಅನಿತಾರವರು ಪುತ್ತುರು ತಾಲೂಕಿನ ಸುಳ್ಯಪದವುದ ಶ್ರೀ ನಾಗಪ್ಪ ಗೌಡ ಕನ್ನಡ್ಕ ಮತ್ತು ಶ್ರೀಮತಿ ಪಾರ್ವತಿ ದಂಪತಿಗಳ ಪುತ್ರಿಯಾಗಿದ್ದು ಇವರ ಪತಿ ಶ್ರೀ ವಿನೋದ್ ಗೌಡ ಬೆಂಗಳೂರಿನ ಉಚ್ಛನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿದ್ದು ಇಬ್ಬರು ಪುತ್ರರನ್ನು ಹೊಂದಿರುತ್ತಾರೆ. ಶ್ರೀಮತಿ ಅನಿತಾರವರು ೨೦೦೦ ದಲ್ಲಿ ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ತಮ್ಮ ಉಪನ್ಯಾಸಕ ವೃತ್ತಿಯನ್ನು ಆರಂಬಿಸಿ ೨೦೦೪ ರ ತನಕ ಸೇವೆ ಸಲ್ಲಿಸಿದ್ದರು. ೨೦೦೯ ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ರಾಮನಗರ ಸರಕಾರಿ ಕಾನೂನು ಕಾಲೇಜಿಗೆ ಉಪನ್ಯಾಸಕಿಯಾಗಿ ಆಯ್ಕೆಯಾದರು. ಪ್ರಸ್ತುತ ಇವರು ಉನ್ನತ ಪದವಿ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ವಿಶೇಷ ಕಾನೂನು ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಕಾನೂನು ವಿಭಾಗದಲ್ಲಿ ಪಿ.ಹೆಚ್.ಡಿ ಪದವಿ ಪಡೆದ ಒಕ್ಕಲಿಗ ಗೌಡ ಜನಾಂಗದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.