Breaking News

ಸುಳ್ಯದಲ್ಲಿ ತಾಲೂಕು ಮಟ್ಟದ ಸಹಕಾರಿ ಸಮಾವೇಶ ಸಮಾರೋಪ


ಆರ್ಥಿಕತೆ ಮತ್ತು ಮಾರುಕಟ್ಟೆಯ ಬೆಲೆಗಳ ಸ್ಥಿರತೆ ಕಾಪಾಡುವುದು ಸಹಕಾರಿ ಸಂಘ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
ಸುಳ್ಯ
ದೇಶದ ಸಹಕಾರಿ ತತ್ವ ಬಹಳ ಯಶಸ್ವಿಕಂಡಿದೆ. ಕೌಟುಂಬಿಕ ವ್ಯವಸ್ಥೆ, ಉಳಿತಾಯ ಮನೋಭಾವಗಳಿಂದ ಸಹಕಾರಿ ಸಂಘ ದೇಶದ ಆರ್ಥಿಕ ಬಲದ ದೊಡ್ಡಕೊಂಡಿಯಾಗಿದೆ. ಇದರಿಂದ ದೇಶದ ಆರ್ಥಿಕ ಬಲ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಈ ಎಲ್ಲ ವ್ಯವಸ್ಥೆಯ ಜತೆಗೆ ರೈತರ ಮೂಲ ನಾಡಿಯಾದ ಮಾರುಕಟ್ಟೆ ಸ್ಥಿರತೆ ಮತ್ತು ದೇಶದ ಆರ್ಥಿಕತೆಯನ್ನು ಕಾಪಾಡುವಲ್ಲಿ ಸಹಕಾರಿ ಸಂಘ ಮಹತ್ತರ ಪಾತ್ರ ವಹಿಸಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಅವರು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಭಾನುವಾರ ನಡೆದ ಸಹಕಾರ ಭಾರತಿ ಸಂಸ್ಥಾಪಕ ದಿ. ಲಕ್ಷ್ಮಣ ರಾವ್ ಇನಾಂದಾರ್‌ರವರ ಜನ್ಮಶತಮಾನೋತ್ಸವದ ಅಂಗವಾಗಿ ಸುಳ್ಯ ತಾಲೂಕು ಮಟ್ಟದ ಸಹಕಾರಿಗಳ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಹಕಾರ ಭಾರತಿಯ ತಾಲೂಕು ಅಧ್ಯಕ್ಷ ಪದ್ಮನಾಭ ಚೌಟಾಜೆಯವರ ಅಧ್ಯಕ್ಷತೆಯನ್ನು ವಹಿಸಿದರು.
ಸಹಕಾರ ಭಾರತಿಯ ಅಖಿಲ ಭಾರತ ಉಪಾಧ್ಯಕ್ಷ ಪದ್ಮನಾಭ ಕೊಂಕೋಡಿ ಸಮಾರೋಪ ಭಾಷಣ ಮಾಡಿದರು. ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಉದಯ ರೈ ಮಾದೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವೇದಿಕೆಯಲ್ಲಿ ಮಂಗಳೂರು ಜನತಾ ಬಜಾರ್ ನಿರ್ದೇಶಕ ಪ್ರಸನ್ನ.ಕೆ, ಮಂಗಳೂರು ಸ್ಕ್ಯಾಡ್ಸ್ ನಿರ್ದೇಶಕ ಜಯರಾಮ ರೈ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎ.ವಿ.ತೀರ್ಥರಾಮ, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ರವೀಂದ್ರಕುಮಾರ್, ದ.ಕ.ಉಡುಪಿ ಮಹಿಳಾ ಕೋ. ಆಪರೇಟಿವ್ ಬ್ಯಾಕ್‌ನ ಶ್ರೀಮತಿ ಶೋಭಾ ನಲ್ಲೂರಾಯ, ಸುಳ್ಯ ಸಹಕಾರ ಸಮಾವೇಶ ಸಂಚಾಲಕ ಕೃಷ್ಣಪ್ರಸಾದ್ ಮಡ್ತಿಲ ಇದ್ದರು.
ಸುಳ್ಯ ಸಹಕಾರ ಸಮಾವೇಶದ ಅಧ್ಯಕ್ಷ ಮುಳಿಯ ಕೇಶವ ಸ್ವಾಗತಿಸಿ, ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.