Breaking News

ಅರಂತೋಡು: ಸ್ಕೂಲ್ ಬಸ್ಸಿನ ಚಕ್ರಕ್ಕೆ ಸಿಲುಕಿ ೬ವರ್ಷದ ಮಗು ಮೃತ್ಯು

ಅರಂತೋಡಿನಲ್ಲಿ ಶಾಲಾ ಬಸ್‌ನ ಅಡಿಗೆ ಬಿದ್ದು ಗಾಯಗೊಂಡಿರುವ ೬ವರ್ಷದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ನಿನ್ನೆ ಸಂಜೆ ಕೆ.ವಿ.ಜಿ ಐ.ಪಿ.ಎಸ್ ಸ್ಕೂಲ್ ಬಸ್‌ನಲ್ಲಿ ಅರಂತೋಡಿನಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ೧ನೇ ತರಗತಿಯ ಅಗನ್ಯ ಬಸ್‌ನ ಇನ್ನೊಂದು ರಸ್ತೆಯ ಬದಿಗೆ ಹೋಗುವ ವೇಳೆ, ಅದೇ ಬಸ್‌ನ ಚಕ್ರದಡಿಗೆ ಬಿದ್ದು ತೀವ್ರ ಜಖಂಗೊಂಡಿದ್ದಾಳೆ. ತಕ್ಷಣ ಮಗುವನ್ನು ಕೆ.ವಿ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಆದರೆ ಹೊಟ್ಟೆಯ ಭಾಗಕ್ಕೆ ತಗಲಿದ ತೀವ್ರ ಏಟಿನಿಂದ ಮಗು ನಿನ್ನೆ ರಾತ್ರಿಯೇ ಕೊನೆಯುಸಿರೆಳೆದಿದ್ದಾಳೆ. ಅಗನ್ಯ ಅರಂತೋಡು ಸೊಸೈಟಿಯಲ್ಲಿ ಉದ್ಯೋಗಿಯಾಗಿರುವ ಅಪ್ಪಕುಂಞಿಯವರ ಮಗಳು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.