Breaking News

ತಂಬಿನಮಕ್ಕಿ: ಬೈಕ್-ಬೈಕ್ ಢಿಕ್ಕಿ – ಸವಾರನಿಗೆ ಗಾಯ

ಬೆಳ್ಳಾರೆಯ ತಂಬಿನಮಕ್ಕಿ ಎಂಬಲ್ಲಿ ಬೈಕ್- ಬೈಕ್ ನಡುವೆ ಢಿಕ್ಕಿ ಹೊಡೆದುಕೊಂಡು, ಸವಾರ ಗಾಯಗೊಂಡ ಘಟನೆ ನಡೆದಿದೆ. ಆನಂದ ರೈ ಎಂಬವರು ಬೆಳ್ಳಾರೆಯಿಂದ ಪಂಜ ಕಡೆಗೆ ಹೋಗುತ್ತಿದ್ದಾಗ ಬಾಳಿಲದಿಂದ ಬೆಳ್ಳಾರೆ ಕಡೆಗೆ ಗಿರಿಧರ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ತಂಬಿನಮಕ್ಕಿ ತಿರುವಿನಲ್ಲಿ ಪರಸ್ಪರ ಢಿಕ್ಕಿ ಹೊಡೆದುಕೊಂಡಿತು. ಪರಿಣಾಮ ಆನಂದ ರೈ ಎಂಬವರು ರಸ್ತೆಗೆ ಬಿದ್ದು ಕಾಲಿಗೆ ಗಾಯವಾಗಿತ್ತು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಈ ಬಗ್ಗೆ ಆನಂದ ರೈಯವರು ಬೆಳ್ಳಾರೆ ಠಾಣೆಯಲ್ಲಿ ಗಿರಿಧರರ ಮೇಲೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.